ಸೋಮವಾರಪೇಟೆ NEWS DESK ಅ.2 : ಕೊಡಗು ವಿಮೆನ್ಸ್ ಕಾಫಿ ಅವೇರ್‌ನೆಸ್ ಸಂಸ್ಥೆ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಬಿಗ್ ಕಪ್ ಮಡಿಕೇರಿ, ಬೆರಿಸ್ ಅಂಡ್ ಲೀಗ್ಸ್, ಬ್ಲಾಸಮ್ ಅಗ್ರಿ ಶಾವರ್ಸ್ ಮತ್ತು ಕಾಫಿ ಬೋರ್ಡ್ ಆಫ್ ಇಂಡಿಯಾ ಇವುಗಳ ಸಹಯೋಗದೊಂದಿಗೆ ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಇಲ್ಲಿನ ಚಿಕ್ಕಬಸಪ್ಪ ಕ್ಲಬ್ ಮುಂಭಾಗದಲ್ಲಿ ಸಂಸ್ಥೆಯ ಮಹಿಳಾ ಕಾಫಿ ಬೆಳೆಗಾರರು 900 ಕಪ್ ಕಾಫಿಯನ್ನು ಉಚಿತವಾಗಿ ವಿತರಿಸಿದರು. ಭಾರತದ ಕಾಫಿಗೆ ಮೊದಲು ಸ್ಥಳೀಯವಾಗಿ ಮನ್ನಣೆ ದೊರಕಿಸುವ ಮೂಲಕ ಬಳಕೆದಾರರನ್ನು ಹೆಚ್ಚಿಸುವ, ಕಾಫಿ ಸೇವನೆಯನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅನಿತಾ ನಂದ ಅವರು ತಿಳಿಸಿದರು. ಈ ಸಂದರ್ಭ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಣಿ ನರೇಂದ್ರ ಅನುರಾಧ ವಿಕ್ರಂ, ರಾಜ್‌ಶ್ರೀ ಸದಾನಂದ್, ಪೂರ್ಣಿಮಾ ವಿರೂಪಾಕ್ಷ, ಮಾಲಾ ಮಂಜುನಾಥ್, ತನ್ಮಯಿ ಪ್ರವೀಣ್, ಅಂಪು ಮಹೇಶ್, ಜ್ಯೋತಿ ಶುಭಾಕರ್, ನಳಿನಿ ಕಾಂತ್ ಇತರರು ಇದ್ದರು.