ಮಡಿಕೇರಿ ಅ.22 NEWS DESK : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಗಣೇಶ್ ಕುಲಾಲ್ ಅವರ ಚಿಕಿತ್ಸೆಗಾಗಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದ ನಿವಾಸಿ, ಆಟೋ ಚಾಲಕ ಗಣೇಶ್ ಕುಲಾಲ್ ಅವರ ಮನೆಗೆ ತೆರಳಿದ ಸಂಘದ ಪದಾಧಿಕಾರಿಗಳು ದಾನಿಗಳಿಂದ ಸಂಗ್ರಹಿಸಲಾದ ಮೊತ್ತವನ್ನು ಗಣೇಶ್ ಅವರ ಚಿಕಿತ್ಸೆಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಘದ ಜಿಲ್ಲಾಧ್ಯಕ್ಷ ಕೆ.ಕುಶಾಲಪ್ಪ, ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ, ಪದಾಧಿಕಾರಿಗಳಾದ ಸುರೇಶ್ ಕುಲಾಲ್ , ಎ.ಎ.ಚೇತನ ಕುಲಾಲ್, ತೇಜಸ್ ಕುಲಾಲ, ಚಂದ್ರಶೇಖರ್ ಕುಲಾಲ್, ರವಿಕುಲಾಲ್, ವಿಶ್ವನಾಥ ಕುಲಾಲ್, ಮಾಸ್ಟರ್ ತನ್ಮಯ್ ಕುಲಾಲ, ಮಾಸ್ಟರ್ ಧ್ಯಾನಿಕ್ ಕುಲಾಲ್, ಗಣೇಶ ಅವರ ಪತ್ನಿ ಹರಿಣಾಕ್ಷಿ ಮತ್ತು ತಾಯಿ ಸೇರಿದಂತೆ ಇನ್ನಿತರು ಹಾಜರಿದ್ದರು.