ಮಡಿಕೇರಿ ನ.1 NEWS DESK : ಕರ್ನಾಟಕ ರಾಜ್ಯ ಸರ್ಕಾರದ ನಿವೃತ್ತ ನೌಕರರ ವೇದಿಕೆಯ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿದರು. 7 ವೇತನ ಆಯೋಗದ ಜಾರಿಗೊಳಿಸುವಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಿದ ಸಲುವಾಗಿ ಶಾಸಕರನ್ನು ಜಿಲ್ಲಾಧಿಕಾರಿಗಳ ಸಂಕೀರ್ಣದಲ್ಲಿರುವ ಶಾಸಕರ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.ಇದೇ ಸಂಧರ್ಭದಲ್ಲಿ ನೌಕರರ ವೇದಿಕೆಯ ಪದಾಧಿಕಾರಿಗಳು ನಿವೃತ್ತ ನೌಕರಿಗೆ ಸಲ್ಲಬೇಕಾದ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ ನಿವೇದನೆಯನ್ನು ಸಲ್ಲಿಸಿದರು. ನಿವೃತ್ತ ನೌಕರರ ನಿವೇದನೆಯನ್ನು ಸ್ವೀಕರಿಸಿದ ಪೊನ್ನಣ್ಣ ಅವರು, ಬೇಡಿಕೆ ಸಮಂಜಸ ಮತ್ತು ಸಮಯೋಚಿತವಾಗಿದ್ದು, ಖಂಡಿತವಾಗಿ ಮುಖ್ಯಮಂತ್ರಿಗಳ ಅವಗಾಹನೆಗೆ ತಂದು ಚರ್ಚಿಸಿ ಬಗೆ ಹರಿಸುವ ಭರವಸೆ ನೀಡಿದರು. ಜಿಲ್ಲಾ ನೌಕರರ ವೇದಿಕೆಯ ಪ್ರಧಾನ ಸಂಚಾಲಕರಾದ ಪಿ.ಎಸ್.ಜನಾರ್ದನ, ಮುಖ್ಯ ಸಂಚಾಲಕರಾದ ಜಿ.ಎಂ.ಚಿನ್ನಯ್ಯ, ಜಿಲ್ಲಾ ಸಂಚಾಲಕರಾದ ಎಂ.ಎಂ.ಬೆಳ್ಯಪ್ಪ, ಪಿ.ಎಸ್.ಸೋಮಯ್ಯ, ಹೆಚ್.ಇ.ದೇವರಾಜ್, ಕೆ.ಪಿ.ಮೋಹನ್ ರವರು ನಿಯೋಗದಲ್ಲಿ ಉಪಸ್ಥಿತರಿದ್ದರು.