ಮಡಿಕೇರಿ ನ.1 NEWS DESK : ಕೊಡವ ಮಕ್ಕಡ ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷರಾಗಿ ಬಾಳೆಯಡ ಪ್ರತೀಶ್ ಪೂವಯ್ಯ, ಚೆಪ್ಪುಡಿರ ರಾಕೇಶ್ ದೇವಯ್ಯ ಹಾಗೂ ತೆನ್ನೀರ ಟೀನಾ ಚಂಗಪ್ಪ ನೇಮಕಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿಯಾಗಿ ಕೇಲೇಟಿರ ದೇವಯ್ಯ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಪೊನ್ನೋಲತಂಡ ವಿನೋದ್ ಉತ್ತಪ್ಪ, ಮಡ್ಲಂಡ ಮೋನೀಶ್ ಸುಬ್ಬಯ್ಯ, ಚೊಟ್ಟೇಯಂಡ ಕಾರ್ಸನ್ ಮುತ್ತಪ್ಪ, ಬಾಳೆಯಂಡ ದಿವ್ಯಾ ಮಂದಪ್ಪ, ಪುತ್ತರಿರ ಶಿವು ನಂಜಪ್ಪ, ಕುಳುವಂಡ ಶೃತಿ ಪೂಣಚ್ಚ, ಪಚ್ಚಾರಂಡ ನಿಶಾ ಸುಬ್ರಮಣಿ ಪೇರಿಯಂಡ ಜಯಂತಿ ಉತ್ತಪ್ಪ, ಶಾಂತೆಯಂಡ ಶ್ವೇತ ಕಾರ್ಯಪ್ಪ, ಆಪಾಡಂಡ ಝಾನ್ಸಿ ಗಣಪತಿ, ಪೆಬ್ಬಟ್ಟೀರ ಶೀತಲ್ ಕಾರ್ಯಪ್ಪ, ಕರವಂಡ ಸೀಮಾ ಗಣಪತಿ, ಪೇರಿಯಂಡ ಯಶೋಧ, ಬೋಟ್ಟೊಳಂಡ ನಿವ್ಯಾ ದೇವಯ್ಯ, ಚೀಯಕ್ ಪೂವಂಡ ಶ್ವೇತನ್ನ್ ಚಂಗಪ್ಪ ಆಯ್ಕೆಯಾಗಿದ್ದಾರೆ. ಸಂಘದ ಸಲಹೆಗಾರರಾಗಿ ಕುಲ್ಲೇಟಿರ ಅಜಿತ್ ನಾಣಯ್ಯ, ಐಚಂಡ ರಶ್ಮಿ ಮೇದಪ್ಪ, ಉಡುವೇರ ರೇಖಾರಘು ಆಯ್ಕೆಯಾಗಿದ್ದು, ಹಿರಿಯ ವಕೀಲರಾದ ಮಂಡೇಟಿರ ಬಿದ್ದಪ್ಪ ಕಾನೂನು ಸಲಹೆಗಾರರಾಗಿದ್ದಾರೆ. ನ.24 ರಂದು ಕೂಟದ ದಾಖಲೆಯ 100ನೇ ಪುಸ್ತಕ ಪುತ್ತರಿರ ಕರುಣ್ ಕಾಳಯ್ಯ ಅವರ ಸಂಪಾದಕತ್ವದ “ನೂರನೇ ಮೊಟ್ಟ್ ” ಪುಸ್ತಕ ಬಿಡುಗಡೆ ಸೇರಿದಂತೆ ಲೇಖಕರಾದ ಐಚಂಡ ರಶ್ಮಿ ಮೇದಪ್ಪ, ಕರವಂಡ ಸೀಮಾ ಗಣಪತಿ, ತೆನ್ನೀರ ಟೀನಾ ಚಂಗಪ್ಪ, ಯಶೋಧ ಪೇರಿಯಂಡ ಅವರು ರಚಿಸಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಪದಾಧಿಕಾರಿಗಳ ಆಯ್ಕೆ ನಡೆದಿದೆಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.