ಮಡಿಕೇರಿ ನ.5 NEWS DESK : ಕವಿಪ್ರನಿನಿ ಯಿಂದ 66/11 ಕೆವಿ ಆಲೂರು ಸಿದ್ದಾಪುರ ಉಪ ಕೇಂದ್ರದ 2024-25 ನೇ ಸಾಲಿನ 3ನೇ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿದ್ದು, ನ.6 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಕೂಡುರಸ್ತೆ, ಮಾಲಂಬಿ, ಮಾಲಂಬಿಬೆಟ್ಟ, ಹೊಸಗುತ್ತಿ, ಗಾರೆಗಟ್ಟ, ಬಡುವನಹಳ್ಳಿ, ಅಂಬಳ್ಳಿ, ಹೊನ್ನೇಕೊಪ್ಪಲು, ಸೀಗೆಮರೂರು, ಕೈಸರವಳ್ಳಿ, ಗೋಣಿಮರೂರು, ಗಣಗೂರು, ನಾಗಾವಲ, ಯಡಂಡೆ, ಉಂಜಿಗನಹಳ್ಳಿ, ಬಾಣಾವರ, ದೊಡ್ಡಳ್ಳಿ, ಕಣಗಾಲು, ಆಲೂರು ಸಿದ್ದಾಪುರ, ಕಂತೆಬಸವನಹಳ್ಳಿ, ಪಳರೆಬೂತು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರುಕೋರಿದ್ದಾರೆ.