ಮಡಿಕೇರಿ ನ.6 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವಿನೂತನ ಕಾರ್ಯಕ್ರಮ ‘ನಾಡೋರ್ಮೆ’ಯು ಅರೆಕಾಡು-ಹೊಸ್ಕೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮನೆಮಾತಾಗಿದೆ. ನಾಡೊರ್ಮೆಯ ವೈಭವವನ್ನು ಕಣ್ತುಂಬಿಕೊಳ್ಳಲು ನಾಡಿನ ಜನತೆ ಕಾತರರಾಗಿದ್ದಾರೆ. ನ.14 ರಂದು ಅರೆಕಾಡಿನ ರಿಯಾವರ್ ರೆಸಾರ್ಟ್ನಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ನಾಡೊರ್ಮೆಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ‘ಕೊಡವ ವೆಲ್ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಕಟ್ಟಡಕ್ಕೆ ಅರೆಕಾಡುವಿನಲ್ಲಿ ಶಂಕು ಸ್ಥಾಪನೆ ನೆರವೇರುವುದು. ಈ ವೇಳೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟರಾಜ, ಸರ್ಕಾರಿ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತಕ್ಕರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹಾಗೂ ‘ಕೊಡವ ವೆಲ್ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು. ನಾಡೊರ್ಮೆಯ ಶುರುವಾರ್ಥ ಅಕಾಡೆಮಿಯ ತಕ್ಕರು ತಪ್ಪಡಕ ಕಟ್ಟುವರು. ನಂತರ ಮುಖ್ಯ ಅತಿಥಿಗಳನ್ನು ಒಡ್ಡೋಲಗ, ತಳಿಯತಕ್ಕಿ ಬೊಳ್ಚ, ದುಡಿಕೊಟ್ಟ್ ಪಾಟ್ನ ಜೊತೆ ಕೊಡವ ಪುರುಷರು ನಿಪ್ಪುಲ್ ತೋಕಾಯಿ ಮೆರವಣಿಗೆಯೊಂದಿಗೆ ಸಭಾ ಸ್ಥಳಕ್ಕೆ ಕರೆತರಲಾಗುವುದು. ಕೊಡವ ಸಾಂಸ್ಕøತಿಕ ಮೆರವಣಿಗೆಗೆ ಅಸಂಖ್ಯಾತ ಪುರುಷರು ಗುಂಡು ಹಾರಿಸುವುದರ ಮೂಲಕ ಚಾಲನೆ ನೀಡಲಿದ್ದು, ಸಭಾ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡರು ಉದ್ಘಾಟಿಸಲಿದ್ದಾರೆ. ಮೈಸೂರಿನ ‘ಪಡಿಪು ಕಯ್ಯಾಲೆ’ ತಂಡದವರಿಂದ ಸ್ವಾಗತ ನೃತ್ಯ, ಉಮ್ಮತ್ತಾಟ್, ಕೊಡವ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ. ಉರ್ಟಿಕೊಟ್ಟ್ ಆಟ್, ಬಾಳೋಪಾಟ್, ಬೊಳಕಾಟ್, ಕತ್ತಿಯಾಟ್, ಚೋದ್ಯ-ಚೋದ್ ಇರುವುದು. ಅಕಾಡೆಮಿಯ ತ್ರೈಮಾಸಿಕ ಸಂಚಿಕೆ ‘ಕೊಡವೋಲೆ’ಯನ್ನು ಬಿಡುಗಡೆ ಮಾಡಲಾಗುವುದು. ಕೊಡವ ಸಂಸ್ಕøತಿ, ಸಾಹಿತ್ಯ ಹಾಗೂ ಸಮಾಜಕ್ಕೆ ಕಾಣಿಕೆ ನೀಡಿರುವ ಸ್ಥಳೀಯ ಒಂದಷ್ಟು ಗಣ್ಯರಿಗೆ ಸನ್ಮಾನ ಮಾಡಲಾಗುವುದು. ಅರೆಕಾಡ್-ಹೊಸ್ಕೇರಿ ಗ್ರಾಮದ “ಪೊಮ್ಮಕ್ಕಡ ಒಕ್ಕೂಟ”ದವರ ಹಲವಾರು ಕೊಡವ ಕಾರ್ಯಕ್ರಮಗಳಿಗೆ ಸಿದ್ದತೆ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ “ಕೊಡವಡ ಮಾಲ್-ಮಟ ಚಿಂಗಾರ” ವಿಷಯವಾಗಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ವಿಚಾರ ಮಂಡನೆ ನಡೆಸಲಿದ್ದಾರೆ. ತಮಿಳಿನ ಮಹಾನ್ ಗ್ರಂಥ ‘ತಿರುಕ್ಕುರಳ್’ನ್ನು ಕೊಡವಕ್ಕೆ ಭಾಷಾಂತರಿಸಿರುವ ರೇವತಿ ಪೂವಯ್ಯರಿಗೆ ಅಕಾಡೆಮಿ ವತಿಯಿಂದ ಕಿರುಕಾಣಿಕೆ ನೀಡಲಾಗುವುದು ‘ಕೊಡವ ವೆಲ್ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಉಪಾಧ್ಯಕ್ಷರಾದ ಬಲ್ಲಚಂಡ ವಿಠಲ್ ಕಾವೇರಪ್ಪನವರು “ಅರೆಕಾಡು-ಹೊಸ್ಕೇರಿ ಕೋವುಲ್ ಕೊಡವಡ ನೇರ್ ನೆಲೆ’ ವಿಷಯವಾಗಿ ವಿಚಾರ ಮಂಡಿಸಲಿರುವರು ‘ನಾಡೊರ್ಮೆ’ಯ ವೈಭವಕ್ಕೆ ಜಿಲ್ಲೆಯ ಶಾಸಕರುಗಳು, ಜಿಲ್ಲಾಧಿಕಾರಿಗಳು, ಅತಿಥಿಗಣ್ಯರು ಸಾಕ್ಷಿಯಾಗಲಿರುವುದು ನಾಡಿನ ಜನತೆಗೆ ಸಂತಸ ತಂದಿದೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಕುಕ್ಕೆರ ಜಯ ಚಿಣ್ಣಪ್ಪ, ರಿಯಾವರ್ ರೆಸಾರ್ಟ್ ಮಾಲಿಕ ಮುಕ್ಕಾಟಿರ ವಿನಯ್, ಶಿಲ್ಪ ತಿಳಿಸಿದರು.