Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ*
  • *ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ ರಾಜಕೀಯ ಪ್ರೇರಿತ: ಮಾನವ ಬಂಧುತ್ವ ವೇದಿಕೆ ಆರೋಪ*
  • *ಮಡಿಕೇರಿ : ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ಸಾರ್ವಜನಿಕ ಅಹವಾಲು ಆಲಿಸಿದ ಲೋಕಾಯುಕ್ತ*
  • *ಕ.ಸಾ.ಪ. ವತಿಯಿಂದ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ; ವಿ.ಎಸ್. ರಾಮಕೃಷ್ಣ ಕೊಡಗಿನ ಮೇರು ಸಾಹಿತಿ: ಟಿ.ಜಿ. ಪ್ರೇಮಕುಮಾರ್ ಬಣ್ಣನೆ*
  • *ಬೇಟೋಳಿ : ರೈತರೊಂದಿಗೆ ಕಂಪನಿಗಳು ಕೈಜೋಡಿಸಿದರೆ ಕೃಷಿಯಲ್ಲಿ ಅಭಿವೃದ್ಧಿ ಸಾಧ್ಯ: ಪೂಜಾ ಸಜೇಶ್*
  • *ಅಭಿಮನ್ಯುವಿಗೆ ಅಕ್ಷರತೇರಿನ ಬೀಳ್ಕೊಡುಗೆ; ಹಿರಿಯ ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪರ ಅಭಿಮನ್ಯು ಕುರಿತ ಎರಡು ಕೃತಿಗಳ ಬಿಡುಗಡೆ; `ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿ*
  •  *ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ; ಗಮನಸೆಳೆದ ಮೊಸರು ಕುಡಿಕೆ ಹಾಗೂ ಮಕ್ಕಳ ಛದ್ಮವೇಷ ಸ್ಪರ್ಧೆ*
  • *ಜೇನುಕಲ್ಲು ಹಾಲು ಉತ್ಪಾದಕರ ಸಂಘಕ್ಕೆ ರೂ.6.78 ಲಕ್ಷ ಲಾಭ*
  • **ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ**
  • *ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಉಪಚುನಾವಣೆಯನ್ನು ಗೆಲ್ಲುವುದಕ್ಕಾಗಿ “ವಕ್ಫ್” ಅಸ್ತ್ರ : ಎಸ್‍ಡಿಪಿಐ ಆರೋಪ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಉಪಚುನಾವಣೆಯನ್ನು ಗೆಲ್ಲುವುದಕ್ಕಾಗಿ “ವಕ್ಫ್” ಅಸ್ತ್ರ : ಎಸ್‍ಡಿಪಿಐ ಆರೋಪ*

ನವೆಂಬರ್ 6, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ನ.6 NEWS DESK : ವಿಧಾನಸಭೆಯ ಉಪಚುನಾವಣೆಯನ್ನು ಗೆಲ್ಲುವ ಏಕೈಕ ಉದ್ದೇಶದಿಂದ ಬಿಜೆಪಿ “ವಕ್ಫ್” ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದೆ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಮುಸ್ಲಿಂ, ಕ್ರಿಶ್ಚಿಯನ್ ಹೆಸರೆತ್ತದೆ ಯಾವುದೇ ಚುನಾವಣೆಗೆ ಹೋಗಿಲ್ಲ, ಇದೀಗ ವಕ್ಫ್ ವಿಚಾರದಲ್ಲಿ ಸುಳ್ಳು ಆರೋಪಗಳನ್ನು ಮಾಡಿ ಕೋಮು ಭಾವನೆಯನ್ನು ಮೂಡಿಸುತ್ತಿದೆ ಎಂದು ಟೀಕಿಸಿದರು. ವಕ್ಫ್ ಆಸ್ತಿ ಎನ್ನುವುದು ಅಲ್ಲಾಹನ ಹೆಸರಿನಲ್ಲಿ ಧಾರ್ಮಿಕ ಭಾವನೆಗಳ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ದಾನ ಮಾಡಿರುವ ಜಾಗವಾಗಿದೆ. ಇದು ಸರ್ಕಾರದ ಸ್ವತ್ತಲ್ಲ, ರಾಜ್ಯ ವ್ಯಾಪಿ 1.25 ಲಕ್ಷ ಏಕರೆ ವಕ್ಫ್ ಆಸ್ತಿ ಇದೆ. ಇದರಲ್ಲಿ 1.02 ಲಕ್ಷ ಏಕರೆ ಒತ್ತುವರಿಯಾಗಿದ್ದು, ಇದೀಗ 23 ಸಾವಿರ ಏಕರೆಯಷ್ಟೆ ಬಾಕಿ ಉಳಿದಿದೆ. ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ನೀಡಿರುವ ಬಗ್ಗೆ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ವಕ್ಫ್ ಗೆ ಸಂಬಂಧಿಸಿದ ಆಸ್ತಿಯನ್ನು ಒತ್ತುವರಿಮಾಡಿಕೊಂಡು ಎಷ್ಟೇ ವರ್ಷಗಳಾಗಿದ್ದರು, ಅದನ್ನು ತಮ್ಮದೆಂದು ಸಾಧಿಸಲು ಬರುವುದಿಲ್ಲ. ಈ ಬಗ್ಗೆ ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದೆ. ವಕ್ಫ್‍ಗೆ ಬಲವಂತದ ಜಾಗವಾಗಲಿ, ತನ್ನದಲ್ಲದ ಒಂದಿಂಚು ಜಾಗವು ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಪ್ರಸ್ತುತ ವಕ್ಫ್ ಬಗ್ಗೆ ಟೀಕಿಸುವ ಬಿಜೆಪಿ 2014ರ ಚುನಾವಣಾ ಪ್ರಣಾಳಿಕೆಯಲ್ಲೆ, ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ಬಿಡಿಸುವುದಾಗಿ ತಿಳಿಸಿದೆ. ಇಂದು ವಕ್ಫ್ ನ್ನು ಟೀಕಿಸುತ್ತಿರುವ ಸಿ.ಟಿ.ರವಿ, ಯತ್ನಾಳ್, ಸೂಲಿಬೆಲೆ ಅವರು ಇದನ್ನು ಓದಿಲ್ಲವೆ ಎಂದು ಅಬ್ದುಲ್ ಮಜೀದ್ ಪಶ್ನಿಸಿದರು. ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದ ಸಂದರ್ಭ ವಕ್ಫ್ ಆಸ್ತಿ ಒತ್ತುವರಿ ಅಪರಾಧವಾಗುತ್ತದೆ. ಇದೀಗ ಒತ್ತುವರಿ ತೆರವುಗೊಳಿಸದಿದ್ದಲ್ಲಿ ಅಧಿಕಾರಿಗಳೆ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆಂದು ಹೇಳಿಕೆ ನೀಡಿದ್ದರು. ಇಷ್ಟೆಲ್ಲ ವಿಚಾರಗಳಿದ್ದರು ಇದೀಗ ಬಿಜೆಪಿ ವಕ್ಫ್ ನೀಡಿರುವ ನೋಟಿಸ್‍ಗಳ ಬಗ್ಗೆ ಸುಳ್ಳು ಪ್ರಚಾರ ನಡೆಸುತ್ತಿರುವುದು ಖಂಡನೀಯವೆಂದರು.
::: ಪುಕ್ಕಲು ಸರ್ಕಾರ :::
ರಾಜ್ಯದ ಕಾಂಗ್ರೆಸ್ ಸರ್ಕಾರ ನಿಷ್ಕ್ರೀಯವಾಗಿದೆ, ಹಿಂದೆಂದೂ ಇಂತಹ ಪುಕ್ಕಲು ಸರ್ಕಾರವನ್ನು ನೋಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ಬಾರಿ ತಮ್ಮದೇ ಹೇಳಿಕೆಗಳಿಗೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದು, ಇವರು ಯು ಟರ್ನ್ ಸಿದ್ದರಾಮಯ್ಯರೆಂದು ಟೀಕಿಸಿದರು. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಇದೀಗ ನೋಟಿಸ್ ಹಿಂದಕ್ಕೆ ಪಡೆಯುವುದಾಗಿ ಹೇಳುತ್ತಿದ್ದು, ಕಾಂಗ್ರೆಸ್ ನಿಲುವುಗಳು ನ್ಯಾಯ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಇರುವುದಕ್ಕೆ ಬದಲಾಗಿ ಬಿಜೆಪಿಗೆ ಹೆದರಿಕೊಂಡು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಾಗಿದೆ ಎಂದು ಆರೋಪಿಸಿದರು. ಪ್ರಸ್ತುತ ರೈತರು ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಅವರನ್ನು ಅಲ್ಲಿಂದ ತೆರವುಗೊಳಿಸಕೂಡದೆಂದು ಇದ್ದಲ್ಲಿ, ಒತ್ತುವರಿಯಾಗಿರುವ ಜಾಗಕ್ಕೆ ಸಮನಾಗಿ ವಕ್ಫ್ ಗೆ ಇತರೆಡೆಯ ಆಸ್ತಿಯನ್ನು ನೀಡಲಿ. ಇಲ್ಲವೆ, ರೈತರಿಗೆ ಪರ್ಯಾಯ ಜಾಗ ಒದಗಿಸಲು ಸರ್ಕಾರ ಮುಂದಾಗಲಿ ಎಂದು ಅಬ್ದುಲ್ ಮಜೀದ್ ಒತ್ತಾಯಿಸಿದರು. ಪ್ರಸ್ತುತ ಜಾಗದ ಆರ್‍ಟಿಸಿಯಲ್ಲಿ “ವಕ್ಫ್ ಆಸ್ತಿ” ಎಂದು ನಮೂದಾಗಿದ್ದು, ಅದು ಸರಿಯಲ್ಲವೆಂದಾದರೆ ನ್ಯಾಯಾಲಯಕ್ಕೆ ತೆರಳಿ ನ್ಯಾಯವನ್ನು ಪಡೆಯಲು ಅವಕಾಶ ಇದ್ದೇ ಇದೆಯೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಾಷಾ ಕುಶಾಲನಗರ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶರೀಫ್ ವಿರಾಜಪೇಟೆ ಹಾಗೂ ಜಿಲ್ಲಾ ಸಮಿತಿ ಸದಸ್ಯ ಅಮಿನ್ ಮೊಹಿಸಿನ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ*

ಸೆಪ್ಟೆಂಬರ್ 9, 2026

*ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ ರಾಜಕೀಯ ಪ್ರೇರಿತ: ಮಾನವ ಬಂಧುತ್ವ ವೇದಿಕೆ ಆರೋಪ*

ಸೆಪ್ಟೆಂಬರ್ 9, 2026

*ಮಡಿಕೇರಿ : ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ಸಾರ್ವಜನಿಕ ಅಹವಾಲು ಆಲಿಸಿದ ಲೋಕಾಯುಕ್ತ*

ಸೆಪ್ಟೆಂಬರ್ 9, 2026

*ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ED ದಾಳಿ ರಾಜಕೀಯ ಪ್ರೇರಿತ: ಮಾನವ ಬಂಧುತ್ವ ವೇದಿಕೆ ಆರೋಪ*

ಸೆಪ್ಟೆಂಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.9: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿರುವ…

*ಮಡಿಕೇರಿ : ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ; ಸಾರ್ವಜನಿಕ ಅಹವಾಲು ಆಲಿಸಿದ ಲೋಕಾಯುಕ್ತ*

ಸೆಪ್ಟೆಂಬರ್ 9, 2026

*ಕ.ಸಾ.ಪ. ವತಿಯಿಂದ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ; ವಿ.ಎಸ್. ರಾಮಕೃಷ್ಣ ಕೊಡಗಿನ ಮೇರು ಸಾಹಿತಿ: ಟಿ.ಜಿ. ಪ್ರೇಮಕುಮಾರ್ ಬಣ್ಣನೆ*

ಸೆಪ್ಟೆಂಬರ್ 9, 2026

*ಬೇಟೋಳಿ : ರೈತರೊಂದಿಗೆ ಕಂಪನಿಗಳು ಕೈಜೋಡಿಸಿದರೆ ಕೃಷಿಯಲ್ಲಿ ಅಭಿವೃದ್ಧಿ ಸಾಧ್ಯ: ಪೂಜಾ ಸಜೇಶ್*

ಸೆಪ್ಟೆಂಬರ್ 9, 2026

*ಅಭಿಮನ್ಯುವಿಗೆ ಅಕ್ಷರತೇರಿನ ಬೀಳ್ಕೊಡುಗೆ; ಹಿರಿಯ ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪರ ಅಭಿಮನ್ಯು ಕುರಿತ ಎರಡು ಕೃತಿಗಳ ಬಿಡುಗಡೆ; `ಮೌನದ ಮಹಾ ಪಯಣ’ ‘ಅಭಿಮನ್ಯುವಿಗೆ ಕಾವ್ಯಾರತಿ’ ಕೃತಿ*

ಸೆಪ್ಟೆಂಬರ್ 9, 2026

 *ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ; ಗಮನಸೆಳೆದ ಮೊಸರು ಕುಡಿಕೆ ಹಾಗೂ ಮಕ್ಕಳ ಛದ್ಮವೇಷ ಸ್ಪರ್ಧೆ*

ಸೆಪ್ಟೆಂಬರ್ 9, 2026

*ಜೇನುಕಲ್ಲು ಹಾಲು ಉತ್ಪಾದಕರ ಸಂಘಕ್ಕೆ ರೂ.6.78 ಲಕ್ಷ ಲಾಭ*

ಸೆಪ್ಟೆಂಬರ್ 9, 2026

**ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ**

ಸೆಪ್ಟೆಂಬರ್ 9, 2026

*ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಸಿಎನ್‌ಸಿಯಿಂದ ದೇವಟ್ ಪರಂಬ್ ಸ್ಮಾರಕ, ಮಡಿಕೇರಿ ಕೋಟೆಯಲ್ಲಿ ಪುಷ್ಪ ನಮನ*

ಸೆಪ್ಟೆಂಬರ್ 9, 2026

*ದೇವಸ್ಥಾನಗಳ ಅಭಿವೃದ್ಧಿಗೆ 50 ಲಕ್ಷ ಅನುದಾನಕ್ಕೆ ಶಾಸಕ ಡಾ. ಮಂತರ್ ಗೌಡ ಮನವಿ*

ಸೆಪ್ಟೆಂಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.