ಮಡಿಕೇರಿ ನ.8 NEWS DESK : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಅಜ್ಜಿ-ತಾತಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಡುವಂಡ. ಪಿ.ಮುತ್ತಪ್ಪ ಮಕ್ಕಳ ಪ್ರತಿಭೆಗೆ ನಾವು ಪ್ರೋತ್ಸಾಹ ನೀಡಬೇಕು. ಪ್ರಸ್ತುತ ಸಮಾಜದಲ್ಲಿ ಮಕ್ಕಳು ಮುಂದೆ ಬರಬೇಕಾದರೆ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು. ಶಾಲಾ ಪ್ರಾಂಶುಪಾಲರಾದ ಎಂ.ಜಿ.ಸವಿತಾ ಮಾತನಾಡಿ, ಮನೆಯಲ್ಲಿ ಅಜ್ಜಿ-ತಾತಂದಿರು ಇದ್ದರೆ ಮಕ್ಕಳು ಸಂಸ್ಕೃತಿಯ ಬಗ್ಗೆ ತಿಳುವಳಿಕೆಯನ್ನು ನೀಡಿ ಮಕ್ಕಳು ಸುಸಂಸ್ಕೃತರಾಗಿ ಬೆಳೆಯುವಲ್ಲಿ ಸಂಶಯವಿಲ್ಲ ಎಂದರು. ನಂತರ ಪುಟಾಣಿಗಳಿಗೆ ದಿನದ ಮಹತ್ವದ ಕುರಿತು ವಿವರಿಸಿದರು. ಕಾರ್ಯಕ್ರಮದ ಕುರಿತು ಅಜ್ಜಿ ತಾತಂದಿರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಅಧಿಕಾರಿ ಎನ್.ಎ.ಪೊನ್ನಮ್ಮ ಹಾಜರಿದ್ದರು. ಶಿಕ್ಷಕಿ ಬಿ.ಎಸ್.ಚಂದ್ರಾವತಿ ಪ್ರಾರ್ಥಿಸಿದರು. ಶಾಹಿರ. ಎಂ.ಹೆಚ್.ಶಾಹಿರ ಸ್ವಾಗತಿಸಿದರು. ವಿನ್ಯಾ ಉತ್ತಪ್ಪ ಮತ್ತು ಎಸ್.ಕೆ.ಕುಸುಮ ಕಾರ್ಯಕ್ರಮ ನಿರೂಪಿಸಿದರು. ಸಿ.ಮಿಥಿಲಾ ಪೊನ್ನಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿಗಳಿಗೆ ನೃತ್ಯ ಹಾಗೂ ಹಾಗೂ ಅಜ್ಜಿ-ತಾತಂದಿರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಆಟೋಟ ಸ್ಪರ್ಧೆಗಳನ್ನು ಕೆ.ಎನ್.ಭರತ್ ಮತ್ತು ದೈಹಿಕ ಶಿಕ್ಷಕರುಗಳಾದ ಹೆಚ್.ಎನ್.ಈರಪ್ಪ, ಸೀಮಾ ಪರ್ವಿನ್ ನಡೆಸಿಕೊಟ್ಟರು.