ಮಡಿಕೇರಿ ಅ.12 NEWS DESK : ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯುತ್ ಸುರಕ್ಷತೆಯಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಕೂಡಿಗೆ ವಿಭಾಗದ ಸಹಾಯಕ ಲೈನ್ ಮ್ಯಾನ್ ಇಸ್ಮಾಯಿಲ್ ಅತ್ತಾರ ವಿದ್ಯುತ್ ಸುರಕ್ಷತೆಯ ಬಗ್ಗೆ, ವಿದ್ಯುತ್ ನಿಂದ ಆಗುವ ಅನಾಹುತಗಳು ಮತ್ತು ಅವಘಡಗಳ ಬಗ್ಗೆ ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮುಟ್ಟದೆ ಗ್ರಾಮದ ಹಿರಿಯರಿಗೆ, ಶಾಲಾ ಶಿಕ್ಷಕರಿಗೆ ತಿಳಿಸುವ ತಿಳಿಸಬೇಕು ಎಂದರು. ವಿದ್ಯಾರ್ಥಿಗಳು ಮನೆ ಹತ್ತಿರ, ಶಾಲೆ ಆವರಣದಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ ಫಾರ್ಮರ್ಗಳ ಹತ್ತಿರಕ್ಕೆ ಹೋಗದಂತೆ ಸಲಹೆ ನೀಡಿದರು. ಟ್ರಾನ್ಸ್ ಪಾರ್ಮ ನ ಹತ್ತಿರ ಹಸುಗಳನ್ನು ಕಟ್ಟುವುದು, ವಿದ್ಯುತ್ ತಂತಿಗಳ ಸಮೀಪದಲ್ಲಿ ಬಟ್ಟೆಗಳನ್ನು ಒಣಗಿಸಲು ಹಾಕುವುದು ಸೇರಿದಂತೆ ಸಾಮಾನ್ಯ ಜ್ಞಾನದ ಮೂಲಕ ಸಮಗ್ರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು, ಕಣಿವೆ, ಜೇನುಕಲ್ಲು ಬೆಟ್ಟದ ಶಾಲೆ, ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿದ್ಯುತ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ವಿವಿಧ ಶಾಲಾ ಶಿಕ್ಷಕರು , ಇಲಾಖೆಯ ನೌಕರರ ವೃಂದದವರು ಹಾಜರಿದ್ದರು.