ಸಿದ್ದಾಪುರ ನ.12 NEWS DESK : ಇಕೋ ಫ್ರೆಂಡ್ಸ್ ವತಿಯಿಂದ ಸಿದ್ದಾಪುರದ ಅರೆಕಾಡು ಸರಕಾರಿ ಶಾಲೆ ಮೈದಾನದಲ್ಲಿ ಆಯೋಜಿಸಲಾದ 9ನೇ ವರ್ಷದ ಅರೆಕಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಸ್ಮಾಯಿಲ್ ಮಾಲೀಕತ್ವದ ಟೀಂ ಎಂ.ಎಸ್.ಡಿ. ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಟೀಮ್ ರೈನ್ಬೋ ವರಿಯರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಎರಡು ದಿನಗಳ ಕಾಲ ನಡೆದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗ್ರಾಮದ ಸುತ್ತಮುತ್ತಲ 9 ತಂಡಗಳು ಭಾಗಿಯಾಗಿದ್ದವು. ಉತ್ತಮ ಹೊಡೆತ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಸ್ತಫ ಪಡೆದುಕೊಂಡರು. ಫೈನಲ್ ಪಂದ್ಯಾದಲ್ಲಿ ಉತ್ತಮ ಆಟಕ್ಕಾಗಿ ಮ್ಯಾನ್ ಆಫ್ ದಿ ಮ್ಯಾಚ್ ಎಂಎಸ್ಡಿ ತಂಡದ ಸಲಾಂ ಪಡೆದುಕೊಂಡರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜುನೈದ್ ಪಡೆದುಕೊಂಡರು. ಹೊಸ್ಕೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಭುಶೇಖರ್ ಮಾತನಾಡಿ, ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದ್ದು, ಕ್ರೀಡಾ ಸೌಹಾರ್ದದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು. ಅರೆಕಾಡು ರಿವರ್ ಹೋಂ ಸ್ಟೇ ನ ಮಾಲೀಕರಾದ ಶಿಲ್ಪಾ ಹಾಗೂ ವಿನಯ್, ಮಾಜಿ ಉಪಾಧ್ಯಕ್ಷ ಯೂಸಫ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಡಾಂಡ ವಿವೇಕಾನಂದ, ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್, ಇಕೋ ಫ್ರೆಂಡ್ಸ್ ಸಂಘಟನೆಯ ಅಧ್ಯಕ್ಷ ಅಕ್ಟರ್ ಅಲಿ ರಸೀದ್, ಸಲಾಂ ಹಾಜರಿದ್ದರು.