ಮಡಿಕೇರಿ ನ.13 NEWS DESK : ಮಡಿಕೇರಿ ತಾಲೂಕು ಸವಿತಾ ಸಮಾಜದ 2023-2024 ನೇ ಸಾಲಿನ ವಾರ್ಷಿಕ ಮಹಾಸಭೆ ನಗರದ ಬಾಲ ಭವನದಲ್ಲಿ ನಡೆಯಿತು. ಸಭೆಯನ್ನು ವಾರ್ಷಿಕ ಸಭೆಯ ನಡಾವಳಿಯಂತೆ ವಾರ್ಷಿಕ ವರದಿಯನ್ನು ಅವಿನಾಶ್ ಬೊಟ್ಲಪ್ಪ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಅಧ್ಯಕ್ಷ ಎಂ.ಟಿ ಮಧು ಮಂಡಿಸಿದರು. ನಂತರ ಕಾರ್ಯಕಾರಿ ಸಮಿತಿಯ ಬದಲಾವಣೆ ಹಾಗೂ ಪುನರಾಯ್ಕೆ ಮಾಡಲಾಯಿತು. ಅದರಂತೆ ಮುಂದಿನ ಸಾಲಿನ ಅಧ್ಯಕ್ಷರಾಗಿ ಎಮ್.ಟಿ.ಮಧು ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಕಿರಣ್ ಚೆಟ್ಟಿಮಾನಿ, ಕಾರ್ಯದರ್ಶಿಯಾಗಿ ಎಂ.ಜಿ.ಚರಣ್ ಸಹ ಕಾರ್ಯದರ್ಶಿಯಾಗಿ ನಿಶಾಂತ್, ಖಜಾಂಚಿಯಾಗಿ ಅವಿನಾಶ್ ಬೊಟ್ಲಪ್ಪ ಆಯ್ಕೆಯಾದರು. ಮಹಿಳಾ ಅಧ್ಯಕ್ಷರಾಗಿ ಆರ್.ಬಿ.ವಸಂತಿ, ಉಪಾಧ್ಯಕ್ಷರಾಗಿ ಲತಾ ವಿಜಯ ಭಂಡಾರಿ ಕಾರ್ಯದರ್ಶಿಯಾಗಿ ಆರ್.ನಂದಿತ, ಸಹ ಕಾರ್ಯದರ್ಶಿ ಅಶ್ವಿನಿ ಮಧು, ನಗರ ಅಧ್ಯಕ್ಷರಾಗಿ ಟಿ.ಜಿ.ಸಂದೇಶ್. ಕ್ರೀಡಾ ಅಧ್ಯಕ್ಷರಾಗಿ ಮಧು ಚೆಟ್ಟಿಮಾನಿ ಹಾಗೂ ಗೌರವಾಧ್ಯಕ್ಷರಾಗಿ ಸುಂದರಮ್ಮ ಮತ್ತು ಈರಪ್ಪ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ದೊರೇಶ್ ಉಪಸ್ಥಿತರಿದ್ದರು ಹಾಗೂ ಎಲ್ಲಾ ಸದಸ್ಯರುಗಳು ಹಾಗೂ ಸವಿತಾ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.