ಮಡಿಕೇರಿ NEWS DESK ನ.13 : ಎರಡು ದಿನಗಳ ಹಿಂದೆ ವಿರಾಜಪೇಟೆಯ ತೆಲುಗರ ಬೀದಿಯಲ್ಲಿ ಲಾರಿ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ. ಕೇರಳ ರಾಜ್ಯದ ಇರಿಟ್ಟಿ ಕುನ್ನೋತ್ ಕಕ್ಕೊಟುಪರಂಬಿಲ್ ಹೌಸ್ ನಿವಾಸಿ ಪ್ರವೀದ್ (45) ಮೃತಪಟ್ಟ ಲಾರಿಯ ಮಾಲೀಕ ಹಾಗೂ ಚಾಲಕ. ನ.11 ರಂದು ಸಂಜೆ ಭದ್ರಾವತಿಯಿಂದ ಕೇರಳ ರಾಜ್ಯಕ್ಕೆ ಭತ್ತ ಸಾಗಿಸುತ್ತಿದ್ದ ಸಂದರ್ಭ ವಿರಾಜಪೇಟೆಯ ತೆಲುಗರ ಬೀದಿಯ ಅಯ್ಯಪ್ಪ ಬೆಟ್ಟದ ಬಳಿ ನಿಯಂತ್ರಣ ತಪ್ಪಿ ಲಾರಿ ಉರುಳಿ ಬಿದ್ದಿತ್ತು. ಅಪಘಾತದಿಂದ ಚಾಲಕ ಪ್ರವೀದ್ ತಲೆ ಭಾಗಕ್ಕೆ ಮಾರಣಾಂತಿಕ ಗಾಯವಾಗಿತ್ತು. ಚಿಕಿತ್ಸೆಗಾಗಿ ಕೇರಳ ರಾಜ್ಯದ ಕಣ್ಣೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀದ್ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.









