Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*
  • *ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಚೆಟ್ಟಳ್ಳಿಯಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ : ಸಹಕಾರ ಸಂಘಗಳು ಆರ್ಥಿಕ‌ ಶಕ್ತಿ ಕೇಂದ್ರಗಳಾಗಬೇಕು : ಎ.ಕೆ.ಮನು ಮುತ್ತಪ್ಪ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಚೆಟ್ಟಳ್ಳಿಯಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ : ಸಹಕಾರ ಸಂಘಗಳು ಆರ್ಥಿಕ‌ ಶಕ್ತಿ ಕೇಂದ್ರಗಳಾಗಬೇಕು : ಎ.ಕೆ.ಮನು ಮುತ್ತಪ್ಪ*

ನವೆಂಬರ್ 15, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಚೆಟ್ಟಳ್ಳಿ ನ.15 NEWS DESK  : ದೇಶವು ಡಿಜಿಟಲೀಕರಣದ ಮೂಲಕ ಆರ್ಥಿಕ ಅಭಿವೃದ್ಧಿಯತ್ತ ಸಾಗುತ್ತಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಬಲಿಷ್ಠ ರಾಷ್ಟ್ರದ ಪಟ್ಟಿಯಲ್ಲಿ 3ನೇ ಸ್ಥಾನ‌ ತಲುಪಲಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ ಅಧ್ಯಕ್ಷ ಅಪ್ಪಚಟ್ಟೋಳಂಡ .ಕೆ.ಮನು ಮುತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಲ ನಿಯಮಿತ, ಕೊಡಗು ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ, ಮಡಿಕೇರಿ ಸಹಕಾರ ಇಲಾಖೆ, ಕೊಡಗು ಜಿಲ್ಲೆ ಹಾಗೂ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ   ಚೆಟ್ಟಳ್ಳಿಯ ಶ್ರೀ ನರೇಂದ್ರ‌ ಮೋದಿ ಸಹಕಾರ ಭವನದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ ಸಹಕಾರ ಚಳುವಳಿಯನ್ನು ಬಲಪಡಿಸುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶವು ಆರ್ಥಿಕತೆಯಲ್ಲಿ ಮುಂದುವರಿದರೆ ದೇಶದ ಅಭಿವೃದ್ಧಿಯ ಜೊತೆಗೆ ಬಡತನ ನಿರ್ಮೂಲನೆ ಆಗಲಿದೆ. ಕೇಂದ್ರ ಸರಕಾರವು ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆರ್ಥಿಕ ಶಕ್ತಿಗಳಾಗಿ ಸಾಗಬೇಕೆಂದು ಹೇಳಿದರು. ಚೆಟ್ಟಳ್ಳಿಯ ಸಹಕಾರ ಸಂಘವು ರೈತರಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಏಳಿಗೆ ಶ್ರಮಿಸುತ್ತ ಸಹಕಾರ ಕ್ಷೇತ್ರದಲ್ಲಿ ಮಾದರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಸಹಕಾರ ಕ್ಷೇತ್ರದಲ್ಲಿ ಪ್ರತೀ ವರ್ಷ ನ.14 ರಿಂದ‌‌ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ಬಾರಿ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ನಡೆಯುತ್ತಿರುವುದು ಹೆಮ್ಮೆ ಎಂದರು. ಸಹಕಾರ ಸಂಘಗಳ ಸದಸ್ಯರು ಪ್ರಾಮಾಣಿಕರೆಂದರು. ಸಹಕಾರ ಸಂಘದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ‌ ನಡೆಯಬಾರದು. ಚೆಟ್ಟಳ್ಳಿ ಸಹಕಾರ ಸಂಘಕ್ಕೂ ಕೆಲವರು ರಾಜಕೀಯವಾಗಿ ತೊಂದರೆ ನೀಡುತ್ತಿದ್ದು, ಕಾನೂನಿನ‌ ಮೂಲಕವೇ ಉತ್ತರಿಸಲು ಸಿದ್ದರಿದ್ದೇವೆ ಎಂದರು. ಸಂಘದ ಮಾಜಿ ಉಪಾಧ್ಯಾಯ ಕಣಜಾಲು ಪೂವಯ್ಯ ಮಾತನಾಡಿ, ಚೆಟ್ಟಳ್ಳಿ ಸಹಕಾರ ಸಂಘದ ಅಭಿವೃದ್ಧಿಗೆ ದುಡಿದ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರಿಗೆ ಸಹಕಾರಿಗಳ ಪರವಾಗಿ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದರು. ಕೆ.ಐ.ಸಿ.ಎಂ. ಮಡಿಕೇರಿಯ ಪಾಂಶುಪಾಲರಾದ ಡಾ.ಆರ್.ಎಸ್.ರೇಣುಕಾ ದಿನದ ಮಹತ್ವದ ಕುರಿತು ಮಾತನಾಡಿ, ಸಹಕಾರ ಸಂಘವು ನಡೆದು ಬಂದ ದಾರಿ, ವಿವಿಧ ಯೋಜನೆಗಳು, ಹೊಸ ಸಹಕಾರ ನೀತಿ, ಸಂಘದ ಅಭಿವೃದ್ಧಿಯ ಗುರಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಸಿವು ಮುಕ್ತ ಭಾರತದ ಯೋಜನೆಯ ಬಗ್ಗೆ ವಿವರಿಸಿದರು. ಸಂಘದ ಮಾಜಿ ಅಧ್ಯಕ್ಷ ಬಿದ್ದಂಡ ಎ.ಅಚ್ಚಯ್ಯ ಸಹಕಾರ ಸಂಘ ಧ್ವಜಾರೋಹಣ ನೆರವೇರಿಸಿ ಸಹಕಾರ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿಯ ಉಪಾಧ್ಯಕ್ಷ ಪಿ.ಸಿ.ಮನು ರಾಮಚಂದ್ರ,  ನಿರ್ದೇಶಕರಾದ ಬಿದ್ದಾಟಂಡ. ಎ. ರಮೇಶ್ ಚಂಗಪ್ಪ, ನಂದಿನೆರವಂಡ .ಎ. ರವಿ ಬಸಪ್ಪ, ಪಿ.ಸಿ. ಅಚ್ಚಯ್ಯ, ಪಿ.ಬಿ. ಯತೀಶ್, ಸಹಕಾರ ಸಂಘಗಳ ಉಪನಿಬಂಧಕ ಜಿ.ಆರ್. ವಿಜಯ್ ಕುಮಾರ್, ಸಹಾಯಕ ನಿಬಂಧಕರಾದ ಶೈಲಜಾ, ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪೇರಿಯನ ಎಸ್. ಪೂಣಚ್ಚ ಹಾಗೂ  ಸಂಘದ ನಿರ್ದೇಶಕರು ಹಾಜರಿದ್ದರು. ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ನಂದಿನಿ ಪ್ರಾರ್ಥಿಸಿದರು, ನಿರ್ದೇಶಕ ಅಕ್ಕಾರಿ ದಯಾನಂದ ಸ್ವಾಗತಿಸಿದರು. ಕೊ.ಜಿ.ಸಹಕಾರ ಯೂನಿಯನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

ಸನ್ಮಾನ :: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಮಡಿಕೇರಿ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿಯ ನಿರ್ದೇಶಕರಾದ ನಾಪಂಡ ಉಮೇಶ್‌ ಉತ್ತಪ್ಪ  ಚೆಟ್ಟಳ್ಳಿ ಸಹಕಾರ ಸಂಘಗಳಲ್ಲಿ ದುಡಿದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳನ್ನು ಸನ್ಮಾನಿಸಿ, ಗೌರವಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 9 NEWS DESK  : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026

*ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*

ಮೇ 9, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.