ಮಡಿಕೇರಿ ನ.15 NEWS DESK : ವಿಭಿನ್ನ, ವಿಶಿಷ್ಟ ಸಂಸ್ಕೃತಿಯುಳ್ಳ ಜನಾಂಗ ಕೊಡವರಾಗಿದ್ದು, ಈ ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿಕೊಂಡು ಹೋಗುವ ಹಾಗೂ ಮುಂದಿನ ಪೀಳಿಗೆಯಲ್ಲಿ ಅಭಿಮಾನ ಹುಟ್ಟಿಸುವ ಕೆಲಸ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಆಗಬೇಕಿದೆ ಎಂದು ಶಾಸಕರಾದ ಡಾ.ಮಂತರ್ ಗೌಡ ಹೇಳಿದರು. ಅರೆಕಾಡುವಿನ ರಿಯಾವರ್ ರೆಸಾಟ್ರ್ಸ್‍ನಲ್ಲಿ ನಡೆದ ಅಕಾಡೆಮಿಯ ವಿನೂತನ ಕಾರ್ಯಕ್ರಮವಾದ ‘ನಾಡೊರ್ಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವ ಸಾಂಸ್ಕೃತಿಕ ಹಬ್ಬವನ್ನು ಆಚರಿಸುವುದರೊಟ್ಟಿಗೆ ಆಯಾಯ ಊರು-ನಾಡಿನ ಯುವ ಜನಾಂಗದ ಪಾಲ್ಗೊಳ್ಳುವಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಆಗಬೇಕಿದೆ. ಹೊರಗೆ ನೆಲೆಸಿರುವ ಯುವಕರನ್ನು ಕೊಡಗಿನಲ್ಲಿಯೇ ನೆಲೆಸುವಂತೆ ಮಾಡಬೇಕು. ಕೊಡವ ಅಕಾಡೆಮಿಯ ಕೆಲಸ-ಕಾರ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ ನಾನು ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಅವರು ಮಾತನಾಡಿ ಕೊಡವ ಆಚಾರ-ವಿಚಾರ, ಸಂಸ್ಕøತಿ ದೇಶದಲ್ಲೇ ಅಗ್ರಸ್ಥಾನದಲ್ಲಿ ನಿಲ್ಲುವಂತದ್ದು. ಇಂತಹ ಹಿರಿಮೆಯುಳ್ಳ ಸಂಸ್ಕøತಿಯನ್ನು ಕೊಡವ ಜನಾಂಗ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ಕೊಡಗಿನಲ್ಲಿ ಆಸ್ತಿ-ಪಾಸ್ತಿಯನ್ನು ಉಳಿಸಿಕೊಂಡು ಹೋದರೆ ಮಾತ್ರ ಸಂಸ್ಕøತಿ ಉಳಿಯಲು ಸಾಧ್ಯ ಎಂದರು. ಇರುವ ಭೂಮಿ-ತೋಟಗಳನ್ನು ಪರಿವರ್ತಿಸಿ ನಿವೇಶನ ಮಾಡುವಂತದ್ದು ತಪ್ಪಬೇಕು. ನಮ್ಮ ಭೂಮಿ-ಆಸ್ತಿ ಎಂದಿಗೂ ನಮ್ಮ ಒಡೆತನದಲ್ಲಿಯೇ ಇರುವಂತಾಗಬೇಕು. ಕೊಡವ ಸಂಸ್ಕøತಿಯ ಬೆಳವಣಿಗೆಗೆ ಇವೆಲ್ಲ ಪೂರಕವಾಗಿದ್ದು ಗದ್ದೆಯನ್ನು ನೆಡುವ ಕೆಲಸ ಮುಂದಿನ ದಿನಗಳಲ್ಲಿ ಸರ್ಕಾರದ ಸಬ್ಸಿಡಿಯೊಂದಿಗೆ ಆಗಬೇಕಿದೆ. ಇದರಿಂದ ಪಾಳುಬಿದ್ದಿರುವ ಗದ್ದೆಗಳ ಉಳುಮೆಯೊಂದಿಗೆ ಅಂತರ್ಜಲದ ಮಟ್ಟ ಮೇಲೇರಿ ಕೊಡಗಿನ ಪರಿಸರ, ಪ್ರಕೃತಿ ತನ್ನತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾಡೊರ್ಮೆಗೆ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರು ಮಾತನಾಡಿ ಕೊಡವ ಸಂಸ್ಕøತಿಯು ಈ ನೆಲದ ಅಸ್ಮಿತೆಯಾಗಿದ್ದು, ಪ್ರಪಂಚದೆಲ್ಲೆಡೆ ಕೊಡವ ಸಂಸ್ಕøತಿ-ಸಾಹಿತ್ಯದ ಕಂಪು ಪಸರಿಸುವ ಕೆಲಸವಾಗಬೇಕಿದೆ. ನಮ್ಮ ಭಾಷೆ, ಸಂಸ್ಕøತಿ ಹಾಗೂ ನೆಲದ ಮೇಲಿನ ಅಭಿಮಾನ-ಹಕ್ಕನ್ನು ಪುನರ್‍ಸ್ಥಾಪಿಸುವುದರ ಮೂಲಕ ಸಂಸ್ಕøತಿಯ ವೈಭವ ಮರುಕಳುಹಿಸುವಂತಾಗಬೇಕು ಎಂದು ನುಡಿದರು. ಪ್ರಪಂಚದ ಯಾವುದೇ ಭಾಗದಲ್ಲಿ ಇರದಂತಹ ವಿಶೇಷ-ವಿಭಿನ್ನ ಸಂಸ್ಕøತಿಯೊಂದು ಕೊಡವ ಜನಾಂಗಕ್ಕೆ ಇದೆ ಎಂಬುದನ್ನು ತಿಳಿಯಬೇಕು ಎಂದರು. ಕೊಡವ ಭಾಷೆಯ ವೈಶಿಷ್ಟ್ಯತೆ, ವ್ಯಾಕರಣದ ಬಗ್ಗೆ ರೆ.ಎಚ್.ಮೋಗ್ಲಿಂಗ್, ಕೊನ್ನಾರ್, ಜಿ.ಆರ್. ರಿಕ್ಟರ್ ಹಾಗೂ ಜರ್ಮನ್ ವಿದ್ವಾಂಸರಾದ ಗ್ರೆಗ್ ಎಂ. ಕೋಕ್ಸ್‍ರಂತಹ ಹಲವಾರು ತಜ್ಞರು ಅಧ್ಯಯನ ನಡೆಸಿ ಪುಸ್ತಕ ಬರೆದಿದ್ದಾರೆ. ಇಂತಹ ವಿಶೇಷ ಆಸಕ್ತಿ ತೋರಿಸಿರುವ ಜನಾಂಗ ಮತ್ತು ಅವರ ಸಂಸ್ಕøತಿ-ಭಾಷೆಯ ಉಳಿವು ಹಾಗೂ ಉನ್ನತಿಯ ಬಗ್ಗೆ ಅಭಿಮಾನ ಇರಬೇಕು. ಹಿರಿಯರು ಪಾಲಿಸಿ-ಪೋಷಿಸಿಕೊಂಡು ಬಂದಿರುವ ಕೊಡವ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯ ಆಗಬೇಕು. ನಾಡೊರ್ಮೆಯ ಉದ್ದೇಶವೇ ಇದಾಗಿದೆ ಎಂದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮಗಳು ಜನಾಂಗದ ಸಂಸ್ಕøತಿ ಹಾಗೂ ಭಾಷೆಗೆ ಹೊಂದಿಕೊಂಡಂತೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಕೊಡವ ಅಕಾಡೆಮಿಯ ಇಂತಹ ಪ್ರತಿಯೊಂದೂ ಕಾರ್ಯಕ್ರಮ ಆಧುನಿಕ ತಂತ್ರಜ್ಞಾನದಲ್ಲಿ ಅಳವಡಿಸಿ ಕೊಳ್ಳುವಂತಾಗಬೇಕು. ಹಾಗಿದ್ದರೆ ಮಾತ್ರ ಮುಂದಿನ ಸಾವಿರಾರು ವರ್ಷಗಳು ಕಳೆದರೂ ಅವುಗಳನ್ನು ನೋಡಿ ಆನಂದಿಸಲು ಸಾಧ್ಯ ಎಂದರು. ಅಂತೆಯೇ, ಅಕಾಡೆಮಿಯ ಮುಂದಿನ ಮೂರು ತಿಂಗಳಮಟ್ಟಿಗಿನ ಪ್ರತಿಯೊಂದು ಕಾರ್ಯಕ್ರಮಗಳನ್ನು ಮುಂಚಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವಂತಾದರೆ ಆಯಾಯ ಭಾಗದ, ಊರು-ನಾಡಿನ ಜನತೆ ಪೂರ್ವ ತಯಾರಿ ಮಾಡಿಕೊಳ್ಳಲು ಹಾಗೂ ಆಚರಣೆಗಳು, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ ಎಂದು ಸಲಹೆ ಮಾಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಶನ್ ಅಸೋಸಿಯೇಷನ್ ವತಿಯಿಂದ ನೀಡಿರುವ ಆತಿಥ್ಯ ಹಾಗೂ ಗೌರವಾದರಗಳು ನನ್ನ ಹುಟ್ಟೂರಿನಲ್ಲಿ ದೊರೆತ ಗೌರವದಂತಾಗಿದೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿ ಕೊಡವ ಸಂಸ್ಕøತಿ, ಭಾಷೆಯ ಬೆಳವಣಿಗೆ ಹಾಗೂ ಉತ್ತೇಜನ ಕೊಡಗಿನ ಮೂಲನಿವಾಸಿಗಳ ಅನ್ಯೋನ್ಯತೆ ಹಾಗೂ ಸೌಹಾರ್ದಯುತವಾದ ಬಾಳ್ವೆಯಿಂದ ಸಾಧ್ಯ. ಪ್ರತಿಯೊಬ್ಬರೂ ಅವರವರ ಸಂಸ್ಕøತಿ, ಭಾಷೆಯನ್ನು ಪ್ರೀತಿಸುವುದರ ಮೂಲಕ ತಮ್ಮತನ ಉಳಿಸಿಕೊಳ್ಳಬೇಕು. ಕೊಡವ ಸಾಹಿತ್ಯ ಅಕಾಡೆಮಿಯಿಂದ ನಡೆಯುತ್ತಿರುವ ವಿನೂತನ ಕಾರ್ಯಕ್ರಮಗಳು ಕೊಡವ ಸಾಂಸ್ಕøತಿಕ ಲೋಕದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿರುವುದು ಸಂತೋಷವಾಗಿದೆ ಎಂದರು. ಇಲ್ಲಿನ ನೆಲ-ಜಲ, ಸಂಸ್ಕøತಿಯನ್ನು ಪ್ರತಿಯೊಬ್ಬರೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ಪರಂಪರಾಗತವಾಗಿ ಬಂದಿರುವ ಕೊಡವ ಸಂಸ್ಕøತಿಯನ್ನು ನಾವೆಲ್ಲರೂ ಅಭಿಮಾನವಿಟ್ಟು ರಕ್ಷಿಸಿದ್ದಲ್ಲಿ ಮುಂದಿನ ಪೀಳಿಗೆಯಲ್ಲಿ ತಮ್ಮತನ ಪ್ರಜ್ವಲಿಸಲು ಸಾಧ್ಯವಾಗುವುದು ಎಂದು ನಾಡೊರ್ಮೆಗೆ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪನವರು ಅಭಿಪ್ರಾಯಪಟ್ಟರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿತವಾದ ‘ಕೊಡವೋಲೆ’ ತ್ರೈಮಾಸಿಕ ಸಂಚಿಕೆಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬಿಡುಗಡೆಗೊಳಿಸಿದರು.ಅರೆಕಾಡು-ಹೊಸ್ಕೇರಿ ಗ್ರಾಮದ ಜನಾನುರಾಗಿಯಾಗಿರುವ ತೊಂಡಿಯಂಡ ವಾಸು ನಾಣಯ್ಯ, ಬಲ್ಲಚಂಡ ಶಂಭು ಸೋಮಯ್ಯ, ಅಣ್ಣಾರ್‍ಕಂಡ ಪ್ರೇಮ್ ಅಯ್ಯಪ್ಪ, ಕಾಡುಮಂಡ ವಿನೋದ್ ತಿಮ್ಮಯ್ಯ, ಬಲ್ಲಾರಂಡ ಅಭಿನ್ ಮುತ್ತಣ್ಣ ಹಾಗೂ ರಿಯಾವರ್ ರೆಸಾರ್ಟ್ ಮಾಲೀಕರಾದ ಮುಕ್ಕಾಟಿರ ವಿನಯ್-ಶಿಲ್ಪ ದಂಪತಿಯನ್ನು ಅಕಾಡೆಮಿ ಹಾಗೂ ಕೊಡವ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಶಾಲು ಹೊದಿಸಿ, ಹಾರ ಹಾಗೂ ಫಲತಾಂಬೂಲ-ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ‘ಅರೆಕಾಡು-ಹೊಸ್ಕೇರಿ ನಾಡೊರ್ಮೆ’ಯ ಯಶಸ್ಸಿಗೆ ಕಾರಣಕರ್ತರಾದ ಕೊಡವ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾದ ಕುಕ್ಕೆರ ಜಯಾ ಚಿಣ್ಣಪ್ಪರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯರನ್ನು ಕೊಡವ ಅಸೋಸಿಯೇಶನ್ ವತಿಯಿಂದ ಸನ್ಮಾನಿಸಲಾಯಿತು.
ವಿಚಾರ ಮಂಡನೆ: : ಕಾರ್ಯಕ್ರಮದ ಮುಖ್ಯ ಅಂಗವೆಂಬಂತೆ ವಿಚಾರ ಮಂಡನೆಯನ್ನು ಆಯೋಜಿಸಲಾಗಿತ್ತು. ಡಾ. ಮುಲ್ಲೇಂಗಡ ರೇವತಿ ಪೂವಯ್ಯರಿಂದ “ಕೊಡವಡ ಮಾಲ್-ಮಟ ಚಿಂಗಾರ” ವಿಷಯವಾಗಿ ಮಂಡಿಸಿದ ಮಾಹಿತಿಯನ್ನು ಪ್ರತಿಯೊಬ್ಬರೂ ಉತ್ಸಾಹದಿಂದ ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರೇವತಿ ಪೂವಯ್ಯರಿಗೆ ಅಕಾಡೆಮಿ ವತಿಯಿಂದ, ತಮಿಳಿನ ‘ತಿರುಕ್ಕುರಳ್’ನ್ನು ಕೊಡವಕ್ಕೆ ಭಾಷಾಂತರಿಸಿರುವ ಗೌರವವಾಗಿ ಒಟ್ಟು ಒಂದುವರೆ ಲಕ್ಷ ರೂಪಾಯಿಯ ಅಂತಿಮ ಕಂತು ಇಪ್ಪತ್ತೈದು ಸಾವಿರವನ್ನು ನೀಡಿ, ಸನ್ಮಾನಿಸಲಾಯಿತು. ಊರಿನ ಹಿರಿಯರಿಂದ ದೀಪ ಬೆಳಗಿಸುವುದರ ಮೂಲಕ ನಾಡೊರ್ಮೆಗೆ ಚಾಲನೆ ನೀಡಲಾಯಿತು. ಈ ವೇಳೆ ಜಿಲ್ಲಾಧಿಕಾರಿಗಳಿಂದ ಅವರುಗಳಿಗೆ ಶಾಲು ಹೊದಿಸಿ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಈ ವೇಳೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಅರೆಕಾಡುವಿನ ರಸ್ತೆ ಹಾಗೂ ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ವಿಷಯವಾಗಿ ಕೊಡವ ಅಸೋಸಿಯೇಶನ್ ವತಿಯಿಂದ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಅವರನ್ನು ಹಾಗೂ ಮುಖ್ಯ ಅತಿಥಿಗಳನ್ನು ಗ್ರಾಮಸ್ಥರು ಕೊಂಬು-ಕೊಟ್ಟು, ದುಡಿಕೊಟ್ಟು, ತಳಿಯತಕ್ಕಿ ಬೊಳ್‍ಚದೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಆಹ್ವಾನಿಸಿದರು. ಈ ವೇಳೆ ಏಳು ಜನ ಗಂಡಸರು ಗುಂಡಿನ ತೋಪಿನೊಂದಿಗೆ ನಾಡೊರ್ಮೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ನಾಡೊರ್ಮೆಯಲ್ಲಿ ಮೈಸೂರಿನ ‘ಪಡಿಪು ಕಯ್ಯಾಲೆ’ ತಂಡದ ಕುಲ್ಲಚಂಡ ವಿನುತ ಕೇಸರಿ ಮುಂದಾಳತ್ದದ ತಂಡದವರಿಂದ ಉಮ್ಮತಾಟ್, ಸ್ವಾಗತ ನೃತ್ಯ, ಕೊಡವ ನೃತ್ಯಗಳ ಪ್ರದರ್ಶನವನ್ನು ಏರ್ಪಡಿಲಾಗಿತ್ತು. ಬೆಕ್ಕೆಸೊಡ್ಲೂರಿನ ಶ್ರೀ ಮಂದತವ್ವ ಕೊಡವ ಸಾಂಸ್ಕøತಿಕ ಸಂಘದ ಮಲ್ಲಮಡ ಶಾಮಲ ತಂಡದವರಿಂದ ಗೆಜ್ಜೆತಂಡ್ ನೃತ್ಯ ಎಲ್ಲರ ಮನಸೂರೆಗೊಂಡವು. ಕೊಡವ ಹಾಡುಗಾರ ಮಾಳೇಟಿರ ಅಜಿತ್ ಪೂವಣ್ಣರಿಂದ ಕೊಡವ ಹಾಡುಗಳು ಪ್ರತಿಯೊಬ್ಬರಲ್ಲಿ ಮಂದಹಾಸ ಮೂಡಿಸಿದವು. ಮಡಿಕೇರಿ ಕೊಡವ ಕಲಾತಂಡದವರಿಂದ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ ಮುಂದಾಳತ್ವದಲ್ಲಿ ಬಾಳೋಪಾಟ್, ಬೊಳಕಾಟ್ ಕಾರ್ಯಕ್ರಮಗಳು ನಡೆದವು. ಮೈಸೂರಿನ ಕೊಡವ ಜಾನಪದ ತಜ್ಞ ಡಾ.ಚೇನಂಡ ರಘು ಉತ್ತಪ್ಪರಿಂದ ದುಡಿಕೊಟ್ಟ್ ದೇಶಕೆಟ್ಟ್ ಪಾಟ್ ಉತ್ತಮವಾಗಿ ಮೂಡಿಬಂತು. ನಾಡೊರ್ಮೆಯ ಇಡೀ ದಿನದ ಕಾರ್ಯಕ್ರಮವನ್ನು ಚೆಯ್ಯಂಡ ಸತ್ಯ ಗಣಪತಿ ಹಾಗೂ ಚೀಯಂಡಿರ ರಕ್ಷಿತ ಉತ್ತಪ್ಪ ಅಚ್ಚುಕಟ್ಟಾಗಿ ನಿರೂಪಿಸುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಾಡೊರ್ಮೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಎಲ್ಲಾ ಸದಸ್ಯರು, ಕೊಡವ ವೆಲ್ಫೇರ್ ಅಸೋಸಿಯೇಶನ್‍ನ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶಾಸಕರಾದ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಈ ವೇಳೆ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕೊಡಗು ಜಿಲ್ಲಾ ಗ್ಯಾರೆಂಟಿ ಯೋಜನಾ ಅನುμÁ್ಠನ ಸಮಿತಿ ಅಧ್ಯಕ್ಷ ತೀತಿರ ದರ್ಮಜ ಉತ್ತಪ್ಪ ಇವರಿಗೆ ಕೊಡಗಿನ ಅಭಿವೃದ್ಧಿಯ ಮೇಲಿರುವ ಕಾಳಜಿ ಹಾಗು ಕಾರ್ಯಸಾಧನೆಯನ್ನು ಗುರುತಿಸಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗು ಅರೆಕಾಡು ಕೊಡವ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ಅಕಾಡೆಮಿಯ ಸದಸ್ಯ-ಸಂಚಾಲಕ ಪುತ್ತರಿರ ಪಪ್ಪು ತಿಮ್ಮಯ್ಯ ಹಾಗೂ ಸದಸ್ಯರಾದ ಕಂಬೆಯಂಡ ಡೀನ ಬೋಜಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪಾನಿಕುಟ್ಟಿರ ಕುಟ್ಟಪ್ಪ, ನಾಪಂಡ ಕುಟ್ಟಪ್ಪ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ನಾಯಂದಿರ ಶಿವಾಜಿ, ನಾಯಕಂಡ ಬೇಬಿ ಚಿಣ್ಣಪ್ಪ, ಚೆಪ್ಪುಡಿರ ಎ. ಉತ್ತಪ್ಪ, ಪೊನ್ನಿರ ಯು. ಗಗನ್, ಕೊಡವ ಅಸೋಸಿಯೇಷನ್ ಉಪಾಧ್ಯಕ್ಷರಾದ ಬಲ್ಲಚಂಡ ವಿಠಲ್ ಕಾವೇರಪ್ಪ, ಖಜಾಂಚಿ ಕಮಾಂಡರ್ ಕುಕ್ಕೆರ ಕೇಶು ಉತ್ತಪ್ಪ, ಸಹ ಖಜಾಂಚಿ ಬಿದ್ದಂಡ ಭೀಮಯ್ಯ, ಕಾರ್ಯದರ್ಶಿ ನೆಲ್ಲಮಕ್ಕಡ ಪಾವನ್, ಸಹ ಖಜಾಂಚಿ ಕುಕ್ಕೆರ ಸಿ. ಅಯ್ಯಪ್ಪ, ಸದಸ್ಯರಾದ ತೊಂಡಿಯಂಡ ವಾಸು ನಾಣಯ್ಯ, ಅಣ್ಣರ್‍ಕಂಡ ಅಮ್ಮಣ ಸೋಮಯ್ಯ, ಕಾಡುಮಂಡ ಮುತ್ತಣ್ಣ, ಚೇರಂಡ ಸುಭಾಶ್, ಕುಕ್ಕೆರ ದಿನೇಶ್, ಮುಕ್ಕಾಟಿರ ವಿನಯ್, ಚೇರಂಡ ವಿಜಯ್ ಮುತ್ತಪ್ಪ, ಬಲ್ಲಾರಂಡ ಅಭಿನ್, ಕುಕ್ಕೆರ ಗಣೇಶ್, ಕುಕ್ಕೆರ ಕುಶ, ನೆಲ್ಲಮಕ್ಕಡ ಪ್ರಕಾಶ್, ಅಪ್ಪಚೆಟ್ಟೋಳಂಡ ಗಿರೀಶ್, ಅಣ್ಣಾರ್‍ಕಂಡ ವಿಜು, ಚೀಯಂಡಿರ ಉತ್ತಪ್ಪ, ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ. ಗಿರೀಶ್, ಅರ್ಥ ಸದಸ್ಯರಾದ ಕುಮಾರ, ಸಾಹಿತಿ ಕರವಟ್ಟಿರ ಶಶಿ ಸುಬ್ರಮಣಿ, ಹಿರಿಯರಾದ ನಿವೃತ್ತ ಪ್ರಾಂಶುಪಾಲೆ ಡಾ.ಮಂಡೇಪಂಡ ಪುಷ್ಟ ಕುಟ್ಟಣ್ಣ ಇನ್ನಿತರರು ನಾಡೊರ್ಮೆಯ ವೈಭವದಲ್ಲಿ ಪಾಲ್ಗೊಂಡಿದ್ದರು.