ಮಡಿಕೇರಿ NEWS DESK ನ.17 : ಮಾದಕ ವಸ್ತು ಎಂಡಿಎಂಎ ಮತ್ತು ಗಾಂಜಾ ಸಾಗಾಟ ಸಾಗಾಟ ಮಾಡುತ್ತಿದ್ದ ಆರೋಪದಡಿ ಕೇರಳದ ಮೂವರು ಸೇರಿ ಐವರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಿರುವಂಗಾಡು ಗ್ರಾಮದ ಸುಜೇಶ್ ಎಂ.ಕೆ (44), ವಿರಾಜಪೇಟೆಯ ಮರೂರು ಗ್ರಾಮದ ಜಬ್ಬರ್.ಯು.ವೈ (38), ವರ್ಷ, ಮೊಹಮ್ಮದ್ ಕುಂಞ (48) ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಿಣರಾಯಿಯ ಜಂಶೀರ್ (37) ಹಾಗೂ ತಲಚೇರಿ ಜಿಲ್ಲೆಯ ಎರನ್ನೋಳಿ ಗ್ರಾಮದ ಶಮ್ಯಾಸ್.ಸಿ.ವಿ (32) ಬಂಧಿತ ಆರೋಪಿಗಳು. ಬಂಧಿತರ ಬಳಿಯಿಂದ 84 ಎಂಡಿಎಂಎ, 7 ಗ್ರಾಂ ಗಾಂಜಾ, ಒಂದು ಕಾರು, ಡಿಜಿಟಲ್ ತೂಕದ ಯಂತ್ರ ಮತ್ತು ಮಾದಕ ವಸ್ತು ಸೇವನೆಗೆ ಬಳಸುವ ಉಪಕರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಜಿ ಗ್ರಾಮದ ಕಿರುಮಕ್ಕಿ-ಕಂಡಿಮಕ್ಕಿ ಜಂಕ್ಷನ್‌ನಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ.ಪಿ, ಪಿಎಸ್‌ಐ ಪ್ರಮೋದ್ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತು. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.
Breaking News
- *ವಿರಾಜಪೇಟೆಯಲ್ಲಿ ಎಂಡಿಎಂಎ ಮತ್ತು ಗಾಂಜಾ ಸಾಗಾಟ : ಐವರ ಬಂಧನ*
- *ಗುಡ್ಡೆಹೊಸೂರು : ರಾಷ್ಟ್ರೀಕೃತ ಬ್ಯಾಂಕ್ ಮಾದರಿಯ ಡಿಜಿಟಲೀಕರಣ ವ್ಯವಸ್ಥೆ ಸಹಕಾರಿ ಕ್ಷೇತ್ರದ ಬ್ಯಾಂಕಿಂಗ್ ನಲ್ಲೂ ಅತ್ಯಗತ್ಯ : ಎಂ.ಎಂ.ಶ್ಯಾಮಲ*
- *ರಾಷ್ಟ್ರೀಯ ಸಬ್ ಜೂನಿಯರ್ ಮಹಿಳಾ ಹಾಕಿ ತಂಡದ ಸೆಂಟರ್ ಫಾರ್ವರ್ಡ್ ಆಗಿ ಮಡಿಕೇರಿಯ ಅಕ್ಷರ*
- *ಸೋಮವಾರಪೇಟೆ : ಅಪ್ಪು ಅಭಿಮಾನಿಗಳ ಬಳಗದಿಂದ ಸಂಭ್ರಮದ ಮಕ್ಕಳ ದಿನಾಚರಣೆ : ಹಲವು ಸಾಧಕರಿಗೆ ಸನ್ಮಾನ*
- *ನಿಧನ ಸುದ್ದಿ*
- *ಮಡಿಕೇರಿ ಅಂಗನವಾಡಿಯಲ್ಲಿ ಬಾಲಮೇಳದಲ್ಲಿ ಮಿಂಚಿದ ಪುಟಾಣಿಗಳು*
- *ಮಡಿಕೇರಿಯ ಎಸ್ಎಸ್ ಆಸ್ಪತ್ರೆಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ : ಕಲಾಪ್ರತಿಭೆಗೆ ಸಾಕ್ಷಿಯಾದ ವಿದ್ಯಾರ್ಥಿಗಳು*
- *ಮಡಿಕೇರಿಯ ಹಿಂದೂಸ್ತಾನಿ ಶಾಲೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ : ಮಕ್ಕಳಲ್ಲಿ ದೇಶದ ಭವ್ಯ ಭವಿಷ್ಯ ಕಂಡ ನೆಹರು*
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*