
ಸೋಮವಾರಪೇಟೆ NEWS DESK ನ.19 : ಸೋಮವಾರಪೇಟೆ ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಶಾಸಕರ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದೀಗ ಮತ್ತೆ ನೆನೆಗುದಿಗೆ ಬಿದ್ದಿದ್ದು, ತಕ್ಷಣ ಕೆಲಸ ಆರಂಭಿಸಬೇಕೆಂದು ಸಂಘದ ಅಧ್ಯಕ್ಷ ಎಚ್.ಎ. ನಾಗರಾಜ್ ಒತ್ತಾಯಿಸಿದರು. ಈ ಸಂದರ್ಭ ಉಪಾಧ್ಯಕ್ಷ ಅಜಯ್, ಕಾರ್ಯದರ್ಶಿ ಎಚ್.ಬಿ. ರಾಜಪ್ಪ, ಸಲಹೆಗಾರ ಪಳನಿಸ್ವಾಮಿ, ಮಂಜು, ಮೊಹಿದ್ದೀನ್, ಮೋಹನ್, ನಾಗರಾಜು, ರಾಜೇಶ್, ಸಂಗಮೇಶ್, ಕಂಬಳ್ಳಿ ಲೋಕೇಶ್, ಶಿವ ಸೇರಿದಂತೆ ಇತರರು ಇದ್ದರು.








