
ಕರಿಕೆ ನ.20 : ಕೊಡಗಿನ ಗಡಿ ಭಾಗದ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಚ್ಚೆಪಿಲಾವ್, ದೊಡ್ಡಚೇರಿ, ಪಳ್ಳಿಕಳ ಮತ್ತಿತರ ಕಡೆ ಕಳೆದ ಒಂದು ತಿಂಗಳಿನಿoದ ಉಪಟಳ ನೀಡುತ್ತಿರುವ ಚಿರತೆ ಇನ್ನೂ ಕೂಡ ಸೆರೆಯಾಗಿಲ್ಲ.
ಮಂಗಳವಾರ ಪಚ್ಚೆಪಿಲಾವ್ ಭಾಗದಲ್ಲಿ ಸಾಕು ನಾಯಿಯೊಂದರ ಮೇಲೆ ಚಿರತೆ ಮತ್ತೆ ದಾಳಿ ಮಾಡಿದ್ದು, ಈ ದೃಶ್ಯ ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಇಂದು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ದಾಳಿ ಕುರಿತು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ ತಕ್ಷಣ ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.
ಚಿರತೆ ಸೆರೆಗೆ ಬೋನ್ ಅಳವಡಿಸುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದರು. (ವರದಿ : ಶಿವಗಿರಿ ರಾಜೇಶ್)








