ಸೋಮವಾರಪೇಟೆ ನ.20 NEWS DESK : ಕ್ಲಾಸ್ ಆಫ್ 99 ಗ್ರೂಪ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ ನಡೆಯಿತು. ದಂತ ವೈದ್ಯ ರಾಕೇಶ್ ಪಟೇಲ್ ಶಿಬಿರಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಡಾ. ದುರ್ಗಾಪ್ರಸಾದ್ ಹೃದಯ ಆರೋಗ್ಯ ತಪಾಸಣೆ ಮಾಡಿದರು. ರೋಗಿಗಳಿಗೆ ಇಸಿಜಿ, ಇಕೊ ತಪಾಸಣೆ ನಡೆಸಲಾಯಿತು. ಸಾಮಾನ್ಯ ವೈದ್ಯಕೀಯ ತಪಾಸಣೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಡಾ. ಧನುಂಜಯ ಮೇದಪ್ಪ ಮತ್ತು ಡಾ. ಎನ್.ಅಮೂಲ್ಯ ನಡೆಸಿದರು. ನೇತ್ರ ತಜ್ಞ ಕಿರಣ್ ಭಟ್, ಮೂಳೆತಜ್ಞ ಜೀವನ್ ರವಿ ತಪಾಸಣೆ ನಡೆಸಿ, ಔಷಧಿಗಳನ್ನು ವಿತರಿಸಿದರು. ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕರುಂಬಯ್ಯ ರಕ್ತದಾನದ ಪ್ರಾಮುಖ್ಯತೆಯನ್ನು ತಿಳಿಸಿದರು. ಮಡಿಕೇರಿಯ ಪಶು ವೈದ್ಯರಾದ ವಿಭಾ ರಘುರಾಮ್ ಸಾಕುಪ್ರಾಣಿಗಳಿಗೆ ಚಿಕಿತ್ಸೆ ಮತ್ತು ನಾಯಿ ಬೆಕ್ಕುಗಳಿಗೆ ಉಚಿತ ರೇಬಿಸ್ ನಿಯಂತ್ರಣ ಲಸಿಕೆ ನೀಡಿದರು. 346 ಮಂದಿ ಚಿಕಿತ್ಸೆ ಪಡೆದರು. 73 ಜನರು ರಕ್ತ ದಾನ ಮಾಡಿದರು. ಈ ಸಂದರ್ಭ ಇನ್ನರ್‍ವ್ಹೀಲ್ ಅಧ್ಯಕ್ಷೆ ಸಂಗೀತ ದಿನೇಶ್, 99 ಗ್ರೂಪ್‍ನ ಸಂಚಾಲಕಿ ಕುಮುದಾ, ಪ್ರಮುಖರಾದ ಸೌಮ್ಯ, ಧನುಂಜಯ, ಶಿಲ್ಪ, ನಿದಿನ್, ರೂಪ ಮಹೇಶ್, ಸಂದೀಪ್, ಕ್ಲಬ್‍ನ ಸರಿತಾ ರಾಜೀವ್, ಕವಿತಾ ವಿರುಪಾಕ್ಷ, ಆಶಾ ಯೋಗೇಂದ್ರ ಇದ್ದರು.