ಮಡಿಕೇರಿ NEWS DESK ಡಿ.2 : ಸಾಮಾಜಿಕ ಜಾಲತಾಣದಲ್ಲಿ ವೀರಸೇನಾನಿಗಳಾದ ಫೀ.ಮಾ.ಕೆ.ಎಂ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಅವರ ವಿರುದ್ಧ ಅವಹೇಳನಕಾರಿ ಸಂದೇಶ ಹಾಕಿದ ವ್ಯಕ್ತಿಯನ್ನು ಗಡಿಪಾರು ಮಾಡಬೇಕು ಮತ್ತು ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ದ ಮೂಲಕ ತನಿಖೆಗೆ ಒಳಪಡಿಸಬೇಕೆಂದು ಟಿ.ಶೆಟ್ಟಿಗೇರಿ ಕೊಡವ ಸಂಘದ ಅಧ್ಯಕ್ಷ ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ವಿಶ್ವವೇ ಗೌರವದಿಂದ ನೋಡುವ ಫೀ.ಮಾ.ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅಂತಹವರ ವಿರುದ್ಧ ಅವಹೇಳನಕಾರಿ ಸಂದೇಶ ಹಾಕಿರುವುದು ಕೊಡಗಿನಲ್ಲಿ ನೆಲೆಸಿರುವ ನಿವೃತ್ತ ಸೈನಿಕರು ಸೇರಿದಂತೆ ಎಲ್ಲಾ ಸಮೂಹದವರಿಗೆ ನೋವನ್ನುಂಟುಮಾಡಿದೆ ಎಂದು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ 29 ರಂದು ತಾವು ಶ್ರೀಮಂಗಲ ಠಾಣೆಯಲ್ಲಿ ಪ್ರಕರಣಕ್ಕೆ ಕಾರಣವಾಗಿರುವ ವ್ಯಕ್ತಿಯ ವಿರುದ್ಧ ದೂರನ್ನು ನೀಡಿದ್ದರು ಅದನ್ನು ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದರು. ಮುಂದಿನ 15 ದಿನಗಳ ಒಳಗಾಗಿ ಪೊಲೀಸ್ ಇಲಾಖೆ ಪ್ರಕರಣದ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಂಘದ ಉಪಾಧ್ಯಕ್ಷ ಮಚ್ಚಮಾಡ ರಂಜಿ ಹಾಗೂ ಕಾರ್ಯದರ್ಶಿ ಬೋಡಂಗಡ ಕಾರ್ಯಪ್ಪ ಉಪಸ್ಥಿತರಿದ್ದರು.
Breaking News
- *ಕನ್ನಡ ಸಾಹಿತ್ಯ ಭವನ ನಿರ್ಮಾಣ : ಅಗತ್ಯ ಸಹಕಾರಕ್ಕೆ ಕೊಡಗು ಜಿಲ್ಲಾ ಕ.ಸಾ.ಪ ಮನವಿ*
- *ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ‘ಅರೆ ವಿಶೇಷ ಕೊಠಡಿ’ ಉದ್ಘಾಟನೆ : ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೌಲಭ್ಯ ದೊರೆಯಲಿ : ಶಾಸಕ ಡಾ.ಮಂತರ್ ಗೌಡ*
- *ಬೃಹತ್ ಭೂಪರಿವರ್ತನೆ, ಭೂವಿಲೇವಾರಿ, ಲೇಔಟ್, ಮೆಗಾ ಟೌನ್ಶಿಪ್ಗೆ ವಿರೋಧ : ಕಡಂಗದಲ್ಲಿ ಸಿಎನ್ಸಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
- *ಡಿ.8 ರಂದು ಮಡಿಕೇರಿಯಲ್ಲಿ ಸಂಸದರ ನೂತನ ಕಚೇರಿ ಆರಂಭ*
- *ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ*
- *ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*
- *ಕರಿಕೆ ಬಿಜೆಪಿ ಶಕ್ತಿ ಕೇಂದ್ರಕ್ಕೆ ಪದಾಧಿಕಾರಿಗಳ ಆಯ್ಕೆ*
- *ವೀರ ಸೇನಾನಿಗಳಿಗೆ ಅಗೌರವ : ಡಿ.6ರಂದು ಮಡಿಕೇರಿಯಲ್ಲಿ ಮಾಜಿ ಸೈನಿಕರಿಂದ ಪ್ರತಿಭಟನೆ*
- *‘ಸ್ವಾಭಿಮಾನಿ’ ಸಮಾವೇಶದಲ್ಲಿ ಕೊಡಗಿನಿಂದ 8 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ*
- *ಚೇಶೈರ್ ಹೋಮ್ ಶಾಲೆಯ ಮುಖ್ಯಶಿಕ್ಷಕ ಶಿವರಾಜ್ ಗೆ ಸನ್ಮಾನ*