
ಸುಂಟಿಕೊಪ್ಪ ಡಿ.3 NEWS DESK : ಕುಶಾಲನಗರ ಬಸ್ ನಿಯಂತ್ರಕ ಅಶೋಕ್ ಅವರನ್ನು ವಾಸ್ತವ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲು ಸುಂಟಿಕೊಪ್ಪದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ಸಂದರ್ಭ ಖಾಸಗಿ ವಲಯ ಹಾಗೂ ಸರಕಾರಿ ಹುದ್ದೆಗಳಿಗೆ ತೆರಳುವ ಮಂದಿ, ಶಾಲಾ ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ನಿಯಂತ್ರಕರ ಬಳಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಖಾಸಗಿ ವಾಹನಗಳಿಗೆ ಮಾತ್ರ ನಿಗಧಿತ ಆಸನಕ್ಕಿಂತ ಒಂದು ಆಸನದ ಮಂದಿ ಹೆಚ್ಚಿದರೂ ಕಾನೂನು ರೀತಿಯಲ್ಲಿ ದಂಡ ವಿಧಿಸುವ ಅಧಿಕಾರಿಗಳು, ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ನಿತ್ಯವು ಜನತೆಯು ಕಿಕ್ಕಿರಿದು ಉಸಿರುಗಟ್ಟಿದ ವಾತಾವರಣದಲ್ಲೇ ಸಂಚರಿಸುತ್ತಿರುತ್ತಾರೆ. ಆದರೆ ಇವರಿಗೆ ಕಾನೂನು ಅನ್ವಯಿಸುವುದಿಲ್ಲಾವೇ ಎಂದು ಸಾರಿಗೆ ಇಲಾಖೆಯ ಅಧಿಕಾರಿಯನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಸಮಸ್ಯೆಯ ಗಂಭೀರತೆಯನ್ನು ಅರಿತ ಬಸ್ ನಿಯಂತ್ರಕ ಅಶೋಕ್, ಜಿಪಿಎಸ್ ಚಿತ್ರಗಳನ್ನು ತೆಗೆದು ತಮ್ಮ ಮೇಲಾಧಿಕಾರಿಗಳಿಗೆ ಕಳುಹಿಸಿ, ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.









