ಮಡಿಕೇರಿ ಡಿ.3 NEWS DESK : ಕುಂಗ್ ಫೂ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಒಡಿಶಾದಲ್ಲಿ ನಡೆದ 9ನೇ ರಾಷ್ಟ್ರೀಯ ಕುಂಗ್‍ಫೂ ಚಾಂಪಿಯನ್‍ಶಿಪ್‍ನಲ್ಲಿ ಕೊಡಗಿನ ಕುಂಗ್ ಫೂ ಸಂಸ್ಥೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಯು.ಸಿ.ಕೌಶಿಕ್ ಕುಮಾರ್ ಚಿನ್ನ, ವಿವಕ್ರ ಚೋಂದಮ್ಮ ಚಿನ್ನ, ಶರ್ನಿ ಎ.ಶೆಟ್ಟಿ ಬೆಳ್ಳಿ, ಎಬೆನ್ ಕೆ.ಜೋನಾಫ್ರೆಡ್ ಬೆಳ್ಳಿ ಹಾಗೂ ಎಂ.ಮನ್ವಿತ್ ಮೋಹನ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇವರಿಗೆ ರಾಜ್ಯ ಐಕೆಸಿ ಕುಂಗ್ ಫೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ತರಬೇತುದಾರ ಎನ್.ಸಿ.ಸುದರ್ಶನ್ ತರಬೇತಿ ನೀಡಿದರು.











