ಮಡಿಕೇರಿ ಡಿ.6 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಗೌಡ ವಿದ್ಯಾ ಸಂಘದ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರದ ಪ್ರಯುಕ್ತ ಡಿ.25 ರಂದು ಅರೆಭಾಷೆ ಜನಾಂಗ ಬಾಂಧವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅರೆಭಾಷೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಹಾಗೂ ಕಾರ್ಯದರ್ಶಿ ಪೇರಿಯನ ಕೆ.ಉದಯ ಕುಮಾರ್, ನಗರದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಂಭಾಗಣದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ 2 ಪುಟ ಮೀರದಂತೆ ಅರೆಭಾಷೆ ಸಮುದಾಯದ ಐನ್ ಮನೆ ಬಗ್ಗೆ ಅರೆಭಾಷೆ ಪ್ರಬಂಧ ಸ್ಪರ್ಧೆ, 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅರೆಭಾಷೆ ರಸಪ್ರಶ್ನೆ ಸ್ಪರ್ಧೆ (ಒಟ್ಟು 50 ರಸಪ್ರಶ್ನೆಗಳು, ಸಮಯ 1 ಗಂಟೆ), ಅರೆಭಾಷಿಕ ಬಾಂಧವರಿಗೆ ಅರೆಭಾಷೆ ಸೋಬಾನೆ ಸ್ಪರ್ಧೆ (5 ನಿಮಿಷಗಳು ಮೀರಬಾರದು), 1 ರಿಂದ 4ನೇ ತರಗತಿ ಹಾಗೂ 5 ರಿಂದ 7ನೇ ತರಗತಿಯವರೆಗೆ ಅರೆಭಾಷಿಕ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಡಿ.22ರೊಳಗೆ ಕೊಡಗು ಗೌಡ ವಿದ್ಯಾ ಸಂಘದ ಕಚೇರಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ನವೀನ್ ಹಾಗೂ ಉದಯ ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಪೇರಿಯನ ಉದಯ ಕುಮಾರ್ 8197297516 ಹಾಗೂ ನಿರ್ದೇಶಕಿ ಪುದಿಯನೆರವನ ರೇವತಿ ರಮೇಶ್ 9606184829 ನ್ನು ಸಂಪರ್ಕಿಸಬಹುದಾಗಿದೆ.