
ಮಡಿಕೇರಿ NEWS DESK ಡಿ.7 : ಕಾರ್ಮಿಕ ಮುಖಂಡ ಕೆ.ಗುಣಶೇಖರ್ ಅವರ ನಿಧನಕ್ಕೆ ಎಐಟಿಯುಸಿ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ಹಾಗೂ ಸಿಪಿಐನ ಜಿಲ್ಲಾ ಸಹ ಕಾರ್ಯದರ್ಶಿ ಹೆಚ್.ಎಂ.ಸೋಮಪ್ಪ ಸಂತಾಪ ಸೂಚಿಸಿದ್ದಾರೆ.
ಕೆ.ಗುಣಶೇಖರ್ ಅವರ ಅಗಲಿಕೆ ಇಡೀ ಕಾರ್ಮಿಕ ಸಮುದಾಯಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ, ಅಲ್ಲದೆ ಅತೀವ ದು:ಖವನ್ನು ತಂದಿದೆ. ಶ್ರಮಿಕ ಜೀವಿಗಳ ಪರವಾಗಿ ಹೋರಾಟ ನಡೆಸಿ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುತ್ತಿದ್ದ ಗುಣಶೇಖರ್ ಅವರಿಗೆ ಕೊಡಗು ಜಿಲ್ಲೆಯ ಎಲ್ಲಾ ಕಾರ್ಮಿಕರ ಪರವಾಗಿ ಸಂತಾಪ ಸೂಚಿಸುವುದಾಗಿ ಅವರು ತಿಳಿಸಿದ್ದಾರೆ.








