
ಮಡಿಕೇರಿ NEWS DESK ಡಿ.10 : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ನಾಪಂಡ ಮುತ್ತಪ್ಪ ಸಂತಾಪ ಸೂಚಿಸಿದ್ದಾರೆ. ಓರ್ವ ಅಭಿವೃದ್ಧಿಶೀಲ, ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡ ಬಗ್ಗೆ ನಮಗೆ ದು:ಖವಿದೆ. ಹಲವು ಸಂದರ್ಭಗಳಲ್ಲಿ ಎಸ್.ಎಂ.ಕೃಷ್ಣ ಅವರೊಂದಿಗೆ ಒಡನಾಡುವ ಸದಾವಕಾಶ ದೊರೆತದ್ದು ನನ್ನ ಬದುಕಿನ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ಬೆಂಗಳೂರನ್ನು ವಿಶ್ವದ ಗಮನ ಸೆಳೆದ ನಗರವನ್ನಾಗಿ ರೂಪಿಸಿದ ಹೆಗ್ಗಳಿಕೆ ಕೃಷ್ಣ ಅವರದ್ದಾಗಿದೆ ಎಂದು ಶ್ಲಾಘಿಸಿರುವ ಅವರು, ತಮ್ಮ ಕೆಲಸ ಮತ್ತು ಸಮಯ ಪರಿಪಾಲನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಅಪರೂಪದ ರಾಜಕಾರಣಿಗೆ ತೀವ್ರ ಸಂತಾಪ ಸೂಚಿಸುವುದಾಗಿ ತಿಳಿಸಿದ್ದಾರೆ.









