ಮಡಿಕೇರಿ ಡಿ.12 NEWS DESK : ಬೆಂಗಳೂರಿನ ಲಲಿತ್ ಅಶೋಕ್ ಪಂಚತಾರಾ ಹೋಟೆಲ್ ಸಭಾಂಗಣದಲ್ಲಿ ನಡೆದ “ಮಿಸ್ & ಮಿಸೆಸ್ ಇಂಡಿಯಾ ರೋಲ್ ಮಾಡೆಲ್-2024″ – 2024” ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಕಂಡಂಗಾಲ ಮೂಲದ ಅಪ್ಪಂಡೇರಂಡ ಶಾಮ್ಲಿ ಉತ್ತಯ್ಯ ಮಿಸೆಸ್ ಕೂರ್ಗ್ ಸ್ಕಾಟ್ಲೆಂಡ್ ಕ್ವಿನ್ ಆಗಿ ಹೊರಹೊಮ್ಮಿದ್ದು, 2025ರಲ್ಲಿ ಸಿಂಗಾಪುರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಮಿಸೆಸ್ ಗ್ಲೋಬಲ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಸೌಂದರ್ಯ ತಜ್ಞೆ ನಂದಿನಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ನೂರಾರು ಸ್ಪರ್ಧಿಗಳು ಆಗಮಿಸಿದರು. ಶಾಮ್ಲಿ ಉತ್ತಯ್ಯ ಕಂಡಂಗಾಲ ಮೂಲದ ಅಪ್ಪಂಡೇರಂಡ ನಿತಿನ್ ತಿಮ್ಮಯ್ಯ ಅವರ ಪತ್ನಿ, ಸುಳ್ಳಿಮಾಡ ಪೌತಿ ಉತ್ತಯ್ಯ ಹಾಗೂ ಬೋಜಮ್ಮ ದಂಪತಿಗಳ ಪುತ್ರಿ.