




ವಿರಾಜಪೇಟೆ ಡಿ.12 NEWS DESK : ವಿರಾಜಪೇಟೆಯ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ನಲ್ಲಿ ಗ್ರಾಹಕರ ದಿನವನ್ನು ಆಚರಿಸಲಾಯಿತು. ದಿನದ ಪ್ರಯುಕ್ತ ಮುಂಜಾನೆ ಗಣಪತಿ ಹೋಮ ಹಾಗೂ ಲಕ್ಷ್ಮಿ ಪೂಜೆಯನ್ನು ನೆರವೇರಿಸಲಾಯಿತು. ನಂತರ ಆಗಮಿಸಿದ ಗ್ರಾಹಕರಿಗೆ ಬ್ಯಾಂಕ್ ನ ಹೊಸ ಹೊಸ ಯೋಜನೆಗಳು ಹಾಗೂ ಠೇವಣಿ ವಿಧಾನಗಳು, ಚಿನ್ನಾಭರಣ ಸಾಲ, ವಿಮಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸಿಹಿ ಹಂಚಲಾಯಿತು. ಈ ಸಂದರ್ಭ ಸರಸ್ವತಿ ಸಹಕಾರಿ ಸೊಸೈಟಿಯ ನಿರ್ದೇಶಕರಾದ ಶ್ರೀಕಾಂತ್ ರಾವ್, ಶಾಖಾ ವ್ಯವಸ್ಥಾಪಕ ಡಿ.ಕೆ.ಪ್ರವೀಣ್ , ಸಿಬ್ಬಂದಿಗಳು ಹಾಗೂ ಗ್ರಾಹಕರು ಹಾಜರಿದ್ದರು.