
ಸುಂಟಿಕೊಪ್ಪ ಡಿ.13 NEWS DESK : ಸುಂಟಿಕೊಪ್ಪ 1ನೇ ವಿಭಾಗ ಹಾಗೂ 3ನೇ ವಿಭಾಗದಲ್ಲಿ ಇದೀಗ ನೂತನ ಟ್ರಾನ್ಸ್ಫಾರಂ ಅಳವಡಿಸುವ ಮೂಲಕ ವಿದ್ಯುತ್ ಇಲಾಖೆ ಗ್ರಾಮಸ್ಥರ ಗಂಭೀರ ಸಮಸ್ಯೆಯ ಪರಿಹಾರಕ್ಕೆ ಮುಂದಾಗಿದ್ದು, ಚೆಸ್ಕಾಂ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಶ್ಲಾಘನೆ ವ್ಯಕ್ತಪಡಿಸಿದೆ. ಸುಂಟಿಕೊಪ್ಪ 1ನೇ ವಿಭಾಗದ ಗುಡ್ಡಪ್ಪ ರೈ, ಶಿವರಾಮ ರೈ ಬಡಾವಣೆ ಹಾಗೂ ಮಾಸ್ಟರ್ ಬಡಾವಣೆಯಯಲ್ಲಿ ವಿದ್ಯುತ್ ಮಂದಬೆಳಕಿನ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಇಲ್ಲಿನ ನಿವಾಸಿಗಳು ಪಂಚಾಯಿತಿ ಸದಸ್ಯರುಗಳ ಗಮನಕ್ಕೆ ತಂದ ಮೇರೆಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಚೆಸ್ಕಾಂ ಇಲಾಖೆಗೆ ನೂತನ ಟ್ರಾನ್ಸ್‌ಫಾರಂ ಅಳವಡಿಸುವಂತೆ ಮನವಿ ಮಾಡಲಾಗಿತ್ತು. ಇದೀಗ ನೂತನ ಟ್ರಾನ್ಸ್ಫಾರಂ ಅಳವಡಿಸುವ ಮೂಲಕ ವಿದ್ಯುತ್ ಇಲಾಖೆ ಗ್ರಾಮಸ್ಥರ ಗಂಭೀರ ಸಮಸ್ಯೆಯನ್ನು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಸಭೆಯಲ್ಲಿ ನಿರ್ಣಯ ಕೈಗೊಂಡು ಪಂಚಾಯಿತಿ ವತಿಯಿಂದ ಚೆಸ್ಕಾಂ ಇಲಾಖೆಗೆ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಚೆಸ್ಕಾಂ ಕಿರಿಯ ಅಭಿಯಂತರರಾದ ಲವಕುಮಾರ್ ಸ್ಥಳ ಪರಿಶೀಲನೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದ ಮೇರೆಗೆ ಇಲಾಖೆ ಸುಂಟಿಕೊಪ್ಪ 1ನೇ ವಿಭಾಗದ ಗುಡ್ಡಪ್ಪ ರೈ, ಶಿವರಾಮ ರೈ ಬಡಾವಣೆ 25 ಕಿ.ಲೋವ್ಯಾಟ್ಸ್ ಹಾಗೂ ಮಾಸ್ಟರ್ ಬಡಾವಣೆಗೆ 65 ಕಿ.ಲೋ ವ್ಯಾಟ್ಸ್ ಟ್ರಾನ್ಸ್‍ಫಾರಂ ಅಳವಡಿಸುವ ಮೂಲಕ ಈ ಭಾಗದ ನಿವಾಸಿಗಳು ಅನುಭವಿಸುತ್ತಿದ್ದ ಮಂದಬೆಳಕಿನ ಸಮಸ್ಯೆಯನ್ನು ನೀಗಿಸುವಲ್ಲಿ ಕ್ರಮ ಕೈಗೊಂಡಿದ್ದಾರೆ. ಇಲಾಖೆಯ ಕಾರ್ಯವೈಖರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಶಬ್ಬಿರ್ ಅವರುಗಳು ಚೆಸ್ಕಾಂ ಇಲಾಖೆಯ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್ ಹಾಗೂ ಕಿರಿಯ ಅಭಿಯಂತರರಾದ ಲವಕುಮಾರ್ ಹಾಗೂ ಸಿಬ್ಬಂದಿಗಳಾದ ಭಾಷ ಗುರು ಶ್ಲಾಘಿಸಿದ್ದಾರೆ.









