ಕುಶಾಲನಗರ ಡಿ.14 NEWS DESK : ಹನುಮ ಜಯಂತಿ ಅಂಗವಾಗಿ ಕುಶಾಲನಗರದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವಿವಿಧ ವಿನ್ಯಾಸಗಳ ಮಂಟಪಗಳ ಅದ್ದೂರಿ ಶೋಭಾಯಾತ್ರೆ ಸಂಭ್ರದಿಂದ ನಡೆಯಿತು. ಕುಶಾಲನಗರ ಪಟ್ಟಣದಲ್ಲಿ ರಾತ್ರಿ ಅಬ್ಬರದ ಡಿಜೆಯೊಂದಿಗೆ ಬೆಳಕಿನ ಚಿತ್ತಾರಗಳು ಮೂಡಿಬಂದು. ಕುಶಾಲನಗರ ರಥ ಬೀದಿಯ ಆಂಜನೇಯ ದೇವಾಲಯದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಮಂಟಪ, ಮಾದಾಪಟ್ಟಣ ರಾಮದೂತ ಜಯಂತಿ ಆಚರಣೆ ಸಮಿತಿ ಎಚ್ ಆರ್ ಪಿ ಕಾಲೋನಿಯ ಅಂಜನಿಪುತ್ರ ಜಯಂತಿ ಉತ್ಸವ ಆಚರಣೆ ಸಮಿತಿ, ಹಾರಂಗಿಯ ವೀರ ಹನುಮ ಸೇವಾ ಸಮಿತಿಯ ಮಂಟಪ, ಮುಳ್ಳುಸೋಗೆ ಚಾಮುಂಡೇಶ್ವರಿ ಉತ್ಸವ ಸಮಿತಿ, ಕೂಡಿಗೆ ಹನುಮ ಸೇವಾ ಸಮಿತಿ, ಗುಡ್ಡೆ ಹೊಸೂರು ವೀರಾಂಜನೇಯ ಸೇವಾ ಸಮಿತಿ ಹಾಗೂ ಬೈಚನಹಳ್ಳಿ ಗೆಳೆಯರ ಬಳಗದ ಮಂಟಪಗಳು ಹನುಮ ಭಕ್ತರ ಮೆರವಣಿಗೆಯಲ್ಲಿ ಬಂದು ವಿಶೇಷ ಕಥಾ ವಸ್ತುಗಳ ಪ್ರದರ್ಶನಗಳನ್ನು ನೀಡಿದವು. ಕುಶಾಲನಗರ ಸೇರಿದಂತೆ ನೆರೆ ಜಿಲ್ಲೆಗಳಿಂದ ಸಾವಿರಾರು ಹನುಮ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕುಣಿದು ಕುಪ್ಪಳಿಸಿದರು. ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಉಪಾಧ್ಯಕ್ಷ ಕಿಶೋರ್ ಕುಮಾರ್, ಬಾಲಕೃಷ್ಣ, ಹೆಚ್.ಟಿ.ವಸಂತ, ಪ್ರಧಾನ ಕಾರ್ಯದರ್ಶಿ ರಾಮನಾಥನ್, ಖಜಾಂಚಿ ಗಿರೀಶ್ ಮತ್ತು ಮಂಟಪಗಳ ಪ್ರಮುಖರು ಇದ್ದರು.ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಮಂಟಪಗಳಲ್ಲಿ ಗುಡ್ಡೆ ಹೊಸೂರು ವೀರಾಂಜನೇಯ ಸೇವ ಸಮಿತಿ ಮತ್ತು ಕೂಡಿಗೆ ಹನುಮ ಸೇವಾ ಸಮಿತಿ ಪ್ರಥಮ ಸ್ಥಾನಗಳಿಸಿದೆ. ಮುಳ್ಳುಸೋಗೆ ಚಾಮುಂಡೇಶ್ವರಿ ಉತ್ಸವ ಸಮಿತಿ ದ್ವಿತೀಯ ಸ್ಥಾನ ಶ್ರೀರಾಮ ಮಂದಿರ ಅಂಜನಿಪುತ್ರ ಜಯಂತಿ ಉತ್ಸವ ಆಚರಣೆ ಸಮಿತಿ ಮಂತಪಗಳು ತೃತೀಯ ಸ್ಥಾನಗಳಿಸಿದೆ. ಪ್ರಥಮ ಸ್ಥಾನ ವಿಜೇತರಿಗೆ ತಲಾ ರೂ.30,000 ನಗದು, ದ್ವಿತೀಯ ಸ್ಥಾನ ವಿಜೇತರಿಗೆ ರೂ.25,000 ಮತ್ತು ತೃತೀಯ ಸ್ಥಾನ ಗಳಿಸಿದ ಮಂಟಪಕ್ಕೆ ರೂ.20,000 ಬಹುಮಾನ ಮತ್ತು ಟ್ರೋಫಿ ಹಾಗೂ ಪಾಲ್ಗೊಂಡ ಎಲ್ಲಾ ಮಂಟಪಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.