ನಾಪೋಕ್ಲು ಡಿ.18 NEWS DESK : ಮೈಸೂರು ಗೌಡ ಸಮಾಜದಲ್ಲಿ ಕೊಡಗಿನ ಸಾಂಪ್ರದಾಯಿಕ ಸುಗ್ಗಿಹಬ್ಬ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಲಾಯಿತು. ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಹಾಗೂ ಚೆರಿಯಮನೆ ಉಮೇಶ್ ಅವರ ನೇತೃತ್ವದಲ್ಲಿ ಕದಿರು ತೆಗೆಯಲಾಯಿತು. ಸಮುದಾಯ ಬಂಧುಗಳಿಗೆ ಸಮಾಜದ ಸಭಾಂಗಣದಲ್ಲಿ ನೆರೆ ಮತ್ತು ಕದಿರು ವಿತರಿಸಲಾಯಿತು. ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ತಂಬಿಟ್ಟು ಪ್ರಸಾದ ವಿತರಿಸಲಾಯಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ, ಸುಗ್ಗಿಕುಣಿತ, ಹುತ್ತರಿಹಾಡು ಮೊದಲಾದವು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಸಮಾಜದ ಪದಾಧಿಕಾರಿಗಳಾದ ಕುದುಪಜೆ ಚಂದ್ರಶೇಖರ್, ಪೊನ್ನೆಟ್ಟಿ ನಂದ, ನಡುಮನೆ ಚಂಗಪ್ಪ, ನಡುಬೆಟ್ಟಿ ಲಕ್ಷ್ಮಣ, ನಿರ್ದೇಶಕರಾದ ಪಟ್ಟಡ ಶಿವಕುಮಾರ್, ಕೊಂಬಾರನ ಸುಬ್ಬಯ್ಯ, ಹೊಸೂರು ರಾಘವಯ್ಯ, ಕುಂಟುಪುನಿ ರಮೇಶ್, ಪಾಣತ್ತಲೆ ವಸಂತ, ತೋಟಂಬೈಲು ಇಂದಿರಾ, ಕುಂಟುಪುನಿ ಶೀಲಾ, ಸಮಾಜದ ಮಾಜಿ ಅಧ್ಯಕ್ಷ ತೋಟಂಬೈಲ್ ಮನೋಹರ್, ಕುದುಪಜೆ ಕುಶಾಲಪ್ಪ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ, ಹೂಟ್ಕಳ್ಳಿ ಗೌಡ ಸಂಘದ ಅಧ್ಯಕ್ಷ ಪೊನ್ನಚ್ಚನ ಅಪ್ಪಯ್ಯ, ಕೊಡಗು ಗೌಡ ಮಹಿಳಾ ಸಮಾಜದ ಅಧ್ಯಕ್ಷೆ ನಡುಬೆಟ್ಟ ಗೀತಾ ಮೊದಲಾದವರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.