ನಾಪೋಕ್ಲು ಡಿ.18 NEWS DESK : ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಪುತ್ತರಿ ವೆಳ್ಳಾಟಂ ಸಾಂಪ್ರದಾಯಿಕವಾಗಿ ಶ್ರದ್ಧಾಭಕ್ತಿಯಿಂದ ಜರುಗಿತು. ಕೇರಳದ ಪ್ರಖ್ಯಾತ ಮಡೆಯನ್ ಅವರಿಂದ ದೇವರನ್ನು ಮಲೆ ಇಳಿಸಲಾಯಿತು. ನಂತರ ಶ್ರೀ ಪೊನ್ನು ಮುತ್ತಪ್ಪ ದೇವರ ವೆಳ್ಳಾಟಂ ನಡೆಯಿತು. ಬಳಿಕ ಗುಳಿಗ, ಕುಟ್ಟಿಚಾತ ದೇವರ ವೆಳ್ಳಾಟಂ ವಿವಿಧ ವಿಧಿ ವಿಧಾನಗಳೊಂದಿಗೆ ನಡೆಯಿತು. ಈ ಸಂದರ್ಭ ವಿವಿಧ ಗ್ರಾಮಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಪೊನ್ನುಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎ.ಕೆ.ಚಂದ್ರನ್, ಕಾರ್ಯದರ್ಶಿ ರಾಜೀವ, ಸಮಿತಿ ಸದಸ್ಯ ಶ್ರೀಧರ್, ವಿಜಯ್, ದೇವಾಲಯದ ಪೂಜಾರಿ ಹರಿದಾಸ್, ಸಮಿತಿ ಸದಸ್ಯರು ಹಾಗೂ ಗ್ರಾಮದ ಪ್ರಮುಖರು, ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನೆರವೇರಿತು.
ವರದಿ : ದುಗ್ಗಳ ಸದಾನಂದ.