ವಿರಾಜಪೇಟೆ ಡಿ.18 NEWS DESK : ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ಪುತ್ತರಿ ಹಬ್ಬದವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಸಭಾಂಗಣದಲ್ಲಿ ಪ್ರಾರ್ಥನಾ ಗೀತೆ, ನುಡಿಮುತ್ತು ಹಾಗೂ ಸುದ್ದಿ ಸಮಾಚಾರ ಒಳಗೊಂಡ ಸಂಪೂರ್ಣ ಕಾರ್ಯಕ್ರಮವನ್ನು ಕೊಡವ ಭಾಷೆಯಲ್ಲಿ ಹಮ್ಮಿಕೊಳ್ಳಲಾಯಿತು. ಕೊಡವ ಭಾಷೆಯ ಪ್ರಾರ್ಥನಾ ಗೀತೆಯನ್ನು 10ನೇ ತರಗತಿ ವಿದ್ಯಾರ್ಥಿಗಳಾದ ಆಶ್ರಯ ಅಕ್ಕಮ್ಮ, ಮಾನ್ವಿ ಮುತ್ತಮ್ಮ, ಜಿ.ಎ.ದೇಚಮ್ಮ ಹಾಗೂ 9ನೇ ತರಗತಿಯ ವಿದ್ಯಾರ್ಥಿಯಾದ ಎಂ.ಜೆ.ಪೂರ್ವಿಕ ಹಾಡಿದರು. 8ನೇ ತರಗತಿಯ ಭೂಮಿಕ ಭೋಜಮ್ಮ ಕೊಡವ ನುಡಿಮುತ್ತು ಹಾಗೂ 9ನೇ ತರಗತಿಯ ವಿದ್ಯಾರ್ಥಿಯಾದ ಪಿ.ಸಿ.ಕಾಜಲ್ ಸುದ್ದಿ ಸಮಾಚಾರ ಓದಿದರು. ಸಹ ಶಿಕ್ಷಕಿ ವೀಣಾ ಪುತ್ತರಿ ಹಬ್ಬದ ವಿಶೇಷತೆಯನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಕೊಡಗಿನ ಜನಪದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಉಡುಗೆಯಲ್ಲಿ ತಾಳಕ್ಕೆ ತಕ್ಕಂತೆ ಉಮ್ಮತಾಟ್ ನೃತ್ಯವನ್ನು 8ನೇ ತರಗತಿಯ ವಿದ್ಯಾರ್ಥಿಗಳಾದ ಎನ್.ಎನ್.ನ್ನಮ್ಮ, ಜಿ.ಟಿ.ಮುತ್ತಮ್ಮ, ಎ.ಎಂ.ರಿಷಿಕಾ, 7ನೇ ತರಗತಿಯ ವಿದ್ಯಾರ್ಥಿಗಳಾದ ಸ್ಪೂರ್ತಿ, ಪಿ.ಬಿ.ದೇಚಮ್ಮ, ಕೆ.ಎಂ.ದೇಚಮ್ಮ, ನಿ.ಶಿಯಾನ, ಕೆ.ಬಿ.ಪ್ರಿಶ, ಎ.ಪಿ.ರಿಷ, ಸಿ.ಎ.ದಿತಿ, ಟಿ.ಎಂ.ಡಿಯಾನ, ಪಿ.ಎಸ್.ಪ್ರಾಧಿನ್ಯ ಪ್ರದರ್ಶಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ಪಿ.ಎಸ್.ದೇವಯ್ಯ ಹಾಗೂ ಕೆ.ಎಸ್.ಅಯ್ಯಪ್ಪ ದಟ್ಟಿ ಕುಪ್ಪಸ ತೊಟ್ಟು ಪರೆ ಕಳಿ ಪ್ರದರ್ಶಿಸಿದರು. 8ನೇ ತರಗತಿಯ ವಿದ್ಯಾರ್ಥಿಯಾದ ಎನ್.ಎನ್.ಪೊನ್ನಮ್ಮ ಹಾಗೂ ಏಳನೇ ತರಗತಿಯ ವಿದ್ಯಾರ್ಥಿಯಾದ ದಕ್ಷ ಟಿ.ಟಿ.ಬೋಜಣ್ಣ ಪುತ್ತರಿ ಹಬ್ಬದ ಸಂಭ್ರಮವನ್ನು ಹಾಡಿನ ಮೂಲಕ ಹಾಡಿದರು. ಈ ಸಂದರ್ಭ ಶಾಲಾ ಆಡಳಿತ ಮಂಡಳಿಯವರು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕಿಯರುಗಳು, ಪ್ರಾಥಮಿಕ ವಿಭಾಗದ ಸಂಯೋಜಿಕಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.