
ಮಡಿಕೇರಿ NEWS DESK ಡಿ.19 : ಮಡಿಕೇರಿ ನಗರದ ಫಝಲ್ ಮಿಲ್ ಮಾಲೀಕ ಎಂ.ಜೆ.ಫಝಲ್ (79) ಅವರು ಅನಾರೋಗ್ಯದಿಂದ ಕಾಸರಗೋಡಿನಲ್ಲಿ ನಿಧನ ಹೊಂದಿದರು. ಮಡಿಕೇರಿಯ ಮದೀನ ಮಸೀದಿಯಲ್ಲಿ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಫಝಲ್ ಅವರು ನಗರಸಭೆಯ ಮಾಜಿ ಸದಸ್ಯ ಸಿರಾಜ್ ಜಾಫ್ರಿ ಅವರ ಸಹೋದರ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ ಮಡಿಕೇರಿಯ ಮದೀನ ಮಸೀದಿಯಲ್ಲಿ ಪ್ರಾರ್ಥನೆಯಾದ ನಂತರ ಖಭರ ಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.











