
ಕೊರಟಗೆರೆ NEWS DESK ಡಿ.19 : ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಕೇವಲ 32 ವರ್ಷದ ಪೊಲೀಸ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬಿಜಾಪುರ ಜಿಲ್ಲೆಯ ಕೊರಟಗೆರೆಯ ತುಂಬುಗಾನಹಳ್ಳಿಯ 12ನೇ ಕೆಎಸ್‌ಆರ್‌ಪಿ ಘಟಕದಲ್ಲಿ ನಡೆದಿದೆ. ಮಲ್ಲಿಕಾರ್ಜುನ್ ಚವಾರ್(32) ಎಂಬುವವರೇ ಮೃತ ಪೊಲೀಸ್ ಸಿಬ್ಬಂದಿ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.











