ಮಡಿಕೇರಿ ಡಿ.19 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಕಳೆದ 2022-23, 2023-24ನೇ ಸಾಲಿನ ಗೌರವ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 1. ಕೊಡವ ಭಾಷೆ-ಸಾಹಿತ್ಯ ಕ್ಷೇತ್ರ 2. ಕೊಡವ ಕಲೆ-ಜಾನಪದ ಕ್ಷೇತ್ರ 3. ಕೊಡವ ಸಂಸ್ಕೃತಿ – ಸಮಾಜ ಸೇವಾ ಕ್ಷೇತ್ರ – ಈ ಮೂರು ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಸಾಧಕರನ್ನು ಈ ಎರಡು ವರ್ಷಗಳ ಸಾಲಿನ ಪ್ರಶಸ್ತಿಗೆ ಪರಿಗಣಿಸಲಾಗುವುದು ಪ್ರತಿಯೊಂದು ಕ್ಷೇತ್ರಕ್ಕೆ ತಲಾ ಒಬ್ಬರಂತೆ ಒಟ್ಟು ಆರು ಜನ ಸಾಧಕರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಸ್ವತಃ ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಅಭಿಮಾನಿಗಳು ಶಿಫಾರಸ್ಸು ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ತಮ್ಮ ಸೇವಾ ವಿವರ ಮತ್ತು ವ್ಯಕ್ತಿ ಪರಿಚಯದ ಎಲ್ಲಾ ಮಾಹಿತಿಯನ್ನು ಅಧ್ಯಕ್ಷರು / ರಿಜಿಸ್ಟ್ರಾರ್ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ಸ್ ಭವನ, ಮ್ಯಾನ್ಸ್ ಕಾಂಪೌಂಡ್ ಮಡಿಕೇರಿ-571201, ಈ ವಿಳಾಸಕ್ಕೆ ಅರ್ಜಿಯನ್ನು ಭಾವಚಿತ್ರ ಹಾಗೂ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಅಕಾಡೆಮಿಗೆ ಕಳುಹಿಸಿಕೊಡಬಹುದು. ಈ ಹಿಂದೆ ಸಲ್ಲಿಸಿರುವವರು ಮತ್ತೆ ತಮ್ಮ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸಲು ಕಡೇ ದಿನಾಂಕ 20.01.2025 ಆಗಿರುತ್ತದೆ. ತದನಂತರ ಸ್ವೀಕೃತವಾಗುವ ಯಾವುದೇ ಅರ್ಜಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಎಂದು ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ತಿಳಿಸಿದ್ದಾರೆ.