Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಅಧೃತ್ ಶರ್ಮ ಕೊಡಗಿಗೆ ಪ್ರಥಮ*
  • *ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಇಂದಿನ ರಾಜಕೀಯ ವ್ಯವಸ್ಥೆ ದು:ಖ ತರಿಸಿದೆ : ಮಡಿಕೇರಿಯಲ್ಲಿ ಮುಖ್ಯಮಂತ್ರಿ ಚಂದ್ರು ಬೇಸರ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಇಂದಿನ ರಾಜಕೀಯ ವ್ಯವಸ್ಥೆ ದು:ಖ ತರಿಸಿದೆ : ಮಡಿಕೇರಿಯಲ್ಲಿ ಮುಖ್ಯಮಂತ್ರಿ ಚಂದ್ರು ಬೇಸರ*

ಡಿಸೆಂಬರ್ 21, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಡಿ.21 NEWS DESK : ಇಂದಿನ ರಾಜಕೀಯ ವ್ಯವಸ್ಥೆ ದು:ಖ ತರಿಸಿದೆ, ವಿಕೇಂದ್ರೀಕರಣ ರಾಜಕಾರಣ ಮರೆಯಾಗಿದ್ದು, ಸರ್ವಾಧಿಕಾರ ಮೆರೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಮತ್ತು ವಿವಿಧ ರಾಜ್ಯಗಳಲ್ಲಿ ಸಂವಿಧಾನಕ್ಕೆ ಪೂರಕವಾದ ರಾಜಕಾರಣ ನಡೆಯುತ್ತಿಲ್ಲ. ಸಮಬಾಳಿನ ಪರಿಕಲ್ಪನೆ ಸಾಕಾರಗೊಳ್ಳುತ್ತಿಲ್ಲ, ಅಧಿಕಾರ ವಿಕೇಂದ್ರೀಕರಣವಾಗುತ್ತಿಲ್ಲ. ಸಮಾಜ ಭ್ರಷ್ಟಾಚಾರ ಮುಕ್ತವಾಗುತ್ತಿಲ್ಲ, ಮತಚಲಾವಣೆಗೂ ಮತದಾರ ಹಣ ಪಡೆಯುವ ರೀತಿಯಲ್ಲಿ ಭ್ರಷ್ಟ ವ್ಯವಸ್ಥೆ ಬೆಳೆದು ಬಿಟ್ಟಿದೆ. ಕುಟುಂಬ ರಾಜಕಾರಣಕ್ಕೆ ಒತ್ತು ನೀಡಲಾಗುತ್ತಿದೆ, ಸರ್ವಾಧಿಕಾರದ ರಾಜಕೀಯ ನಡೆಯುತ್ತಿದೆ. ಸದನದಲ್ಲಿ ವೈಯುಕ್ತಿಕ ನಿಂದನೆಯಾಗುತ್ತಿದೆ, ಹಲ್ಲೆ ಪ್ರಕರಣಗಳು ನಡೆಯುತ್ತಿದೆ ಎಂದರು. ಇಂದಿನ ಶಿಕ್ಷಣ ವ್ಯವಸ್ಥೆ ಇದಕ್ಕೆಲ್ಲ ಮುಖ್ಯ ಕಾರಣವಾಗಿದೆ, ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ. ರಾಜ್ಯದಲ್ಲಿ 60 ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಸ್ವತ: ಶಿಕ್ಷಣ ಸಚಿವರೇ ಹೇಳುತ್ತಿದ್ದಾರೆ. ಈ ನಡುವೆ ಕನ್ನಡ ಶಾಲೆಯ ಉದ್ಧಾರ, ಕನ್ನಡ ಕಡ್ಡಾಯ ಎಂದು ಘೋಷಣೆ ಮಾಡುತ್ತಿದ್ದಾರೆ. ಸಂಸದರು, ಶಾಸಕರ ನೇತೃತ್ವದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು. ದೇಶದ ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಹಕ್ಕು ನೀಡಲಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದು. “ಒಂದು ದೇಶ ಒಂದು ಚುನಾವಣೆ” ಎಂಬ ಚಿಂತನೆ ಸಾಕಾರಗೊಳ್ಳುವುದಿಲ್ಲವೆಂದು ತಿಳಿದಿದ್ದರೂ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಕೇಂದ್ರ ಇದನ್ನು ಜಾರಿಗೆ ತರುವ ಪ್ರಯತ್ನ ಮಾಡಿದೆ. ದೆಹಲಿಯ ಆಮ್ ಆದ್ಮಿ ಪಾರ್ಟಿ ನೇತೃತ್ವದ ಸರಕಾರ ನೀರು, ಶಿಕ್ಷಣ, ವಿದ್ಯುತ್, ಆರೋಗ್ಯ ಮತ್ತು ಸಾರಿಗೆ ವ್ಯವಸ್ಥೆಯನ್ನು ಉಚಿತವಾಗಿ ನೀಡಿ ಯಶಸ್ವಿಯಾಗಿದೆ. ಸಾಮಾನ್ಯ ವಿದ್ಯಾರ್ಥಿ ಕೂಡ ಡಾಕ್ಟರ್, ಇಂಜಿನಿಯರ್ ಆಗಬಹುದಾದ ಅವಕಾಶವನ್ನು ಕಲ್ಪಿಸಲಾಗಿದೆ. ತನ್ನ ಅಭಿವೃದ್ಧಿ ಕಾರ್ಯಗಳ ಮೂಲಕವೇ ಆಮ್ ಆದ್ಮಿ ಸರಕಾರ ಜನಪ್ರಿಯತೆಯನ್ನು ಗಳಿಸಿದೆ. ವಿವಿಧೆಡೆ ಅಸ್ತಿತ್ವವನ್ನು ಕಳೆದುಕೊಂಡು ಹತಾಶಗೊಂಡಿರುವ ಕೇಂದ್ರ ಸರಕಾರ ಆಮ್ ಆದ್ಮಿ ಪಾರ್ಟಿಯ ಪ್ರಗತಿಯನ್ನು ಸಹಿಸದೆ ಕೇಜ್ರಿವಾಲ್ ಸೇರಿದಂತೆ ಸುಮಾರು 12ಮಂದಿಯನ್ನು ಬಂಧಿಸಿ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿತು. ಆದರೆ ನ್ಯಾಯಾಲಯ ಕೇಂದ್ರಕ್ಕೆ ಛೀಮಾರಿ ಹಾಕಿ ಎಲ್ಲರನ್ನು ಬಿಡುಗಡೆಗೊಳಿಸಿದೆ ಎಂದು ಆರೋಪಿಸಿದರು. ಉಚಿತ ಸೌಲಭ್ಯಗಳನ್ನು ನೀಡಿದರೆ ದೇಶ ದಿವಾಳಿಯಾಗುತ್ತದೆ ಎಂದು ಹೇಳಿದವರಿದ್ದಾರೆ. ಆದರೆ ಎಲ್ಲಾ ಸೌಲಭ್ಯಗಳನ್ನು ನೀಡಿದರೂ ದೆಹಲಿ ಅಭಿವೃದ್ಧಿ ಪಥದಲ್ಲಿದೆ. ದೆಹಲಿ ಸರಕಾರವನ್ನು ಇತರ ರಾಜ್ಯಗಳ ರಾಜಕೀಯ ಪಕ್ಷಗಳು ಕಾಪಿ ಮಾಡಿ ಉಚಿತ ಸೌಲಭ್ಯಗಳನ್ನು ಚುನಾವಣೆ ಸಂದರ್ಭ ಘೋಷಿಸಿವೆಯಾದರೂ ಅಧಿಕಾರಕ್ಕೆ ಬಂದ ಮೇಲೆ ಅದನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗುತ್ತಿವೆ ಎಂದು ಟೀಕಿಸಿದರು. ದೆಹಲಿಯಂತೆ ಎಲ್ಲಾ ರಾಜ್ಯಗಳಲ್ಲೂ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿಪರ ಆಡಳಿತ ನಡೆಸಬೇಕೆನ್ನುವ ಗುರಿ ಆಮ್ ಆದ್ಮಿ ಪಾರ್ಟಿಗಿದೆ. ಆದರೆ ನಮ್ಮದು ಹಣವಿಲ್ಲದ ಜನಸಾಮಾನ್ಯರ ಪಕ್ಷವಾಗಿರುವುದರಿಂದ ಸಂಘಟನೆ ವಿಳಂಬವಾಗುತ್ತಿದೆ. ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಜನಜಾಗೃತಿಯ ಮೂಲಕ ಪಕ್ಷವನ್ನು ಬೆಳೆಸಿ ಸಾಮಾನ್ಯ ವ್ಯಕ್ತಿ ಕೂಡ ಶಾಸಕನಾಗಬಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
::: ಕೊಡಗಿಗೆ ಪ್ರತ್ಯೇಕ ಕ್ಷೇತ್ರ :::
ಕೊಡಗು ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಿವೆ, ಇದೊಂದು ವಿಭಿನ್ನ ಭೌಗೋಳಿಕ ರಚನೆಯ ಜಿಲ್ಲೆಯಾಗಿರುವುದರಿಂದ ವಿಧಾನಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಅಗತ್ಯವಿದೆ. ಕೇವಲ ಎರಡು ಕ್ಷೇತ್ರಗಳಾದರೆ ಶಾಸಕರಾದವರಿಗೆ ನಿರ್ವಹಣೆ ಕಷ್ಟವಾಗಲಿದೆ ಮತ್ತು ಅನುದಾನದ ಕೊರತೆಯಾಗಲಿದೆ. ಲೋಕಸಭಾ ಕ್ಷೇತ್ರ ಕೂಡ ಹಿಂದೆ ಕೊಡಗು ಮಂಗಳೂರಿನೊಂದಿಗೆ ಹಂಚಿಕೊಂಡು ಇದೀಗ ಮೈಸೂರಿನೊಂದಿಗಿದೆ. ಕೊಡಗು ಜಿಲ್ಲೆಗೇ ಪ್ರತ್ಯೇಕ ಲೋಕಸಭಾ ಕ್ಷೇತ್ರ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಜಮೀನಿನ ಸಮಸ್ಯೆ ಮುಂದುವರೆದಿದೆ, ಅರಣ್ಯ ಮತ್ತು ಕೃಷಿಭೂಮಿಯ ರಕ್ಷಣೆಗಾಗಿ ಕೊಡಗಿಗೆ ಸೀಮಿತವಾಗಿ ವಿಶೇಷ ಅರಣ್ಯ ನೀತಿಯನ್ನು ಜಾರಿಗೆ ತರಬೇಕಾಗಿದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲೂ ಆಮ್ ಆದ್ಮಿ ಪಾರ್ಟಿಯನ್ನು ಜನಜಾಗೃತಿಯ ಮೂಲಕವೇ ಬೆಳೆಸಲಾಗುವುದು. ಆ ಮೂಲಕ ಕೃಷಿಕರ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸಲಾಗುವುದು ಎಂದರು.
::: ಜಿ.ಪಂ, ತಾ.ಪಂ ಚುನಾವಣೆ :::
ಕಳೆದ ನಾಲ್ಕು ವರ್ಷಗಳಿಂದ ಜಿ.ಪಂ ಮತ್ತು ತಾ.ಪಂ ಚುನಾವಣೆ ನಡೆಸದೆ ರಾಜ್ಯ ಸರಕಾರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಕಡೆಗಣಿಸಿದೆ. ಚುನಾವಣೆಯನ್ನು ಶೀಘ್ರ ನಡೆಸದಿದ್ದರೆ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ರವಿಕುಮಾರ್, ಭೋಜಣ್ಣ ಸೋಮಯ್ಯ, ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಹಾಗೂ ಕಾರ್ಯದರ್ಶಿ ಹೆಚ್.ಬಿ.ಪೃಥ್ವಿ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಅಧೃತ್ ಶರ್ಮ ಕೊಡಗಿಗೆ ಪ್ರಥಮ*

ಮೇ 10, 2026

*ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*

ಮೇ 10, 2026

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಇಂಟರ್ ಗೆಲ್ ಫೈಟಿಂಗ್ ಚಾಂಪಿಯನ್ ಶಿಪ್ : ಪದಕ ಗೆದ್ದ ವಿದ್ಯಾರ್ಥಿಗಳು*

ಮೇ 10, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮೇ 10 : ಇಂಡಿಯನ್ ಇಂಟರ್ ಗೆಲ್ ಫೈಟಿಂಗ್ ಅಸೋಸಿಯೇಷನ್ ವತಿಯಿಂದ ಉತ್ತರ ಪ್ರದೇಶದ ಸಹರಂಗಪುರದಲ್ಲಿ…

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.