ಸುಂಟಿಕೊಪ್ಪ ಡಿ.23 NEWS DESK : ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ, ಕ್ರೀಡೆ ಮುಖ್ಯ ಎಂದು ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆ ವಾರ್ಷಿಕ ಕ್ರೀಡಾಕೂಟ ಸಮಾರಂಭದಲ್ಲಿ ಬೆಂಗಳೂರಿನ ಬಿ.ಬಿ.ಎಂ.ಪಿ.ಹಿರಿಯ ಆರೋಗ್ಯ ಪರಿವೀಕ್ಷಕರಾದ ಕೆ.ಬಿ.ಸಂಧ್ಯಾ ಹೇಳಿದರು. ಸುಂಟಿಕೊಪ್ಪನಾಡು ಪ್ರೌಢಶಾಲೆಯ ಶಾಲಾ ವಾರ್ಷಿಕ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯು ನನ್ನ ವೈಯಕ್ತಿಕ ಬೆಳೆವಣಿಗೆಗೆ ತನ್ನದೆಯಾದ ಕೊಡುಗೆಯನ್ನು ನೀಡಿದೆ ಎಂದಿಗೂ ಈ ಶಾಲೆಯ ಋಣವನ್ನು ಮರೆಯಲು ಸಾಧ್ಯವಿಲ್ಲ, ನಾನು ಹಿರಿಯ ಸರಕಾರಿ ಅಧಿಕಾರಿಯಾಗಿದ್ದರೂ ಕೂಡ ಅಲ್ಲಿ ನನ್ನ ವೃತ್ತಿಪರತೆಯನ್ನು ಸಾಭಿತುಪಡಿಸಲು ಆತ್ಮಸ್ಥೈರ್ಯ, ಜ್ಞಾನ, ಸಾಮಥ್ರ್ಯ ಮುಖ್ಯ. ಅದಕ್ಕೆ ಈ ಶಾಲೆಯ ಶಿಕ್ಷಕರುಗಳು ಕಾರಣಿಭೂತರೆಂದು ಭಾವುಕರಾಗಿ ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕುಂಜಿಲನ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕ.ರಾ.ಪ್ರಾ.ಶಾ.ಶಿ.ಸಂಘದ ಉಪಾಧ್ಯಕ್ಷ ಹಂಚೆಟ್ಟಿರ ಕರುಂಬಯ್ಯ, ಶಾಲೆಯ ಹಳೆಯ ವಿದ್ಯಾರ್ಥಿ, ನಿವೃತ್ತ ಉಪ ಅರಣ್ಯಾ ಸಂರಕ್ಷಣಾಧಿಕಾರಿ ಎಂಎಸ್.ಸುರೇಶ್ ಚಂಗಪ್ಪ, ಮಾಜಿ ಸೈನಿಕ ಪಿ.ಎಸ್.ಲಕ್ಷ್ಮೀನಾರಾಯಣ ಹಾಗೂ ಶಾಲಾ ಮುಖ್ಯೋಪಾದ್ಯಾಯನಿ ಕೆ.ಎಸ್. ಇಂದಿರಾ ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಕ್ರೀಡಾಕೂಟಗಳು ನೆರವೇರಿಸಲಾಯಿತು.