


ಮೂರ್ನಾಡು ಡಿ.24 NEWS DESK : ರಾಜ್ಯಮಟ್ಟದ 16ನೇ ಈಶ ಗ್ರಾಮೋತ್ಸವದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾಂತೂರು-ಮೂರ್ನಾಡು ಮಹಿಳಾ ತಂಡವು ಪ್ರಥಮ ಸ್ಥಾನ ಪಡೆದು ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಈಶ ಗ್ರಾಮೋತ್ಸವದ ಥ್ರೋಬಾಲ್ ಪಂದ್ಯಾವಳಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 14 ತಂಡಗಳ ನಡುವೆ ರೋಮಾಂಚಕ ಪ್ರದರ್ಶನಗಳು ನಡೆದು, ಕೊಡಗು ಜಿಲ್ಲೆಯ ಕಾಂತೂರು-ಮೂರ್ನಾಡು ಮಹಿಳಾ ತಂಡ ಮತ್ತು ಮರಗೋಡು ಬ್ಯಾಕ್ ಪ್ಯಾಂಥರ್ರ್ಸ್ ಪ್ರವೇಶಿಸಿತು. ಈ ಎರಡು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಾಂತೂರು-ಮೂರ್ನಾಡು ಮಹಿಳಾ ತಂಡ ವಿಜಯ ಸಾಧಿಸಿತು. ಈ ತಂಡವು ಇದೆ ತಿಂಗಳು 28 ರಂದು ಕೊಯಂಬುತ್ತೂರಿನ ಈಶ ಯೋಗಕೇಂದ್ರದಲ್ಲಿ ನಡೆಯುವ ರಾಷ್ಟಮಟ್ಟದ ಗ್ರಾಮ ನಾಲೆಯಲ್ಲಿ ಭಾಗವಹಿಸಲಿದ್ದಾರೆ.
ವರದಿ : ಟಿ.ಸಿ.ನಾಗರಾಜ್, ಮೂರ್ನಾಡು.









