


ಮಡಿಕೇರಿ ಡಿ.24 NEWS DESK : ಬೆಂಗಳೂರು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಧಿರಾಜ್ ಮುನಿರಾಜ್ ಬ್ರಿಗ್ರೆಡ್ ಸ0ಯುಕ್ತ ಆಶ್ರಯದಲ್ಲಿ ಜ.6 ರಿಂದ ಜ.8ರ ವರೆಗೆ ದೊಡ್ಡಬಳ್ಳಾಪುರ ಖಾಸ್ ಬಾಗ್ ದುರ್ಗಾಪುರ್ ಆಂಜನೇಯ ದೇವಸ್ಥಾನ ಹತ್ತಿರ ನಡೆಯಲಿರುವ ಪುರುಷರ ಸೀನಿಯರ್ ನ್ಯಾಷನಲ್ ಸ್ಟೇಟ್ ಕಬ್ಬಡಿ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಡಿ.29 ರಂದು ಕೊಡಗು ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆ ಗೆ ಕುಶಾಲನಗರದ ಜ್ಞಾನ ಭಾರತಿ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಟಗಾರರು 85 ಕೆಜಿ ಒಳಗಿರಬೇಕು. ಆಸಕ್ತ ಆಟಗಾರರು ಆಧಾರ್ ಕಾರ್ಡ್ ಹಾಗೂ ಸೂಕ್ತ ದಾಖಲೆಯೊಂದಿಗೆ ಹಾಜರಿರುವಂತೆ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್ ದುಗ್ಗಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಪಿಲ್ ದುಗ್ಗಳ 9731009841, ಮಣಿಕಂಠ 9482863707, ಅವಿನಾಶ್ 9036000141 ಸಂಪರ್ಕಿಸಬಹುದಾಗಿದೆ.









