ಗೋಣಿಕೊಪ್ಪ ಡಿ.25 NEWS DESK : ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ 47 ಚಿನ್ನ 7 ಬಳ್ಳಿ ಪದಕಗಳನ್ನು ಗಳಿಸುವ ಮೂಲಕ ಗೋಣಿಕೊಪ್ಪಲಿನ ಸೈಕ್ಲೋನ್ ನೃತ್ಯ ಸಂಸ್ಥೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಿರಿಯಾಪಟ್ಟಣದ ಅಭಯ ಸಭಾಂಗಣದಲ್ಲಿ, ಕರ್ನಾಟಕ ಕ್ರೀಡಾ ಸಂಘ, ಸ್ಪೋಟ್ರ್ಸ್ ಡಾನ್ಸ್ ಫೆಡರೇಶನ್ ಆಫ್ ಇಂಡಿಯಾ, ಏಷ್ಯನ್ ಸ್ಪೋಟ್ರ್ಸ್ ಕೌನ್ಸಿಲ್, ಇಂಟನ್ರ್ಯಾಷನಲ್ ಸ್ಪೋಟ್ರ್ಸ್ ಫೆಡರೇಶನ್, ಮತ್ತು ಕರ್ನಾಟಕ ರಾಜ್ಯ ಕ್ರೀಡಾ ಚಾಂಪಿಯನ್ ಶಿಪ್ ಆಯೋಜನೆಯಲ್ಲಿ ನಡೆದ ರಾಜ್ಯ ಮಟ್ಟದ 2024-25ನೇ ಸಾಲಿನ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕಗಳಿಸುವ ಮೂಲಕ ಸೈಕ್ಲೋನ್ ನೃತ್ಯ ಸಂಸ್ಥೆ ಸಂಭ್ರಮಿಸಿದೆ. 9 ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 12 ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 15 ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ, 17 ವರ್ಷದೊಳಗಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಜೊತೆಗೆ 12 ವರ್ಷದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಬಳ್ಳಿ ಪದಕವನ್ನು ಪಡೆದುಕೊಳ್ಳುವ ಮೂಲಕ ಫೆಬ್ರವರಿ ತಿಂಗಳಿನಲ್ಲಿ ಗೋವಾ ರಾಜ್ಯದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ನೃತ್ಯ ಸಂಸ್ಥೆಯ ತರಬೇತುದಾರರಾಗಿರುವ ಸೈಕ್ಲೋನ್ ರಮೇಶ್ ಮಾಹಿತಿ ನೀಡಿದ್ದಾರೆ.











