ವಿರಾಜಪೇಟೆ ಡಿ.25 NEWS DESK : ಕೊಡವ ಜಮ್ಮಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸಂಸ್ಥಾಪಕರನ್ನು ಎಮ್ಮೆಮ್ಮಾಡು ಗ್ರಾಮದ ಕಾಳೇರ ಮತ್ತು ನೇರೂಟ್‍ಕಾರಂಡ ಕುಟುಂಬಸ್ಥರು ಸನ್ಮಾನಿಸಿದರು. ಕೊಡವ ಜಮ್ಮಾ ಮುಸ್ಲಿಂ ಕುಟುಂಬಸ್ಥರನ್ನು ಒಂದೇ ವೇದಿಕೆಯಡಿಯಲ್ಲಿ ಒಂದುಗೂಡಿಸುವ ಸಲುವಾಗಿ ಕುವಲೇರ ಅನೀಸ್, ಆಲೀರ ಪವಿಲ್, ಪುದಿಯತ್‍ರ ಮುನೀರ್, ಕುವಲೆರ ಅರ್ಷಾದ್, ಪುದಿಯತ್ ರಿಯಾಜ್, ಕುವಲೆರ ಖಲೀಲ್, ಕುವಲೆರ ಅಷ್ಫಾಕ್, ಆಲಿರ ಸಜೀರ್, ಕುವಲೆರ ನಿಜಾಮುದ್ದೀನ್, ಕುವಲೆರ ಅಜರ್ ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಕಲ್ಚರಲ್ ಎಂಬ ಸಂಘಟನೆಯನ್ನು ಸ್ಥಾಪಿಸಿ ಕೊಡವ ಜಮ್ಮಾ ಮುಸ್ಲಿಂ ಕುಟುಂಬಸ್ಥರಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ ಹಿನ್ನೆಲೆ ಕೊಡವ ಜಮ್ಮಾ ಮುಸ್ಲಿಂ ಸ್ಪೋಟ್ರ್ಸ್ ಮತ್ತು ಕಲ್ಚುರಲ್ ಸಂಘಟನೆಯ ಸಂಸ್ಥಾಪಕರ ಪ್ರಯತ್ನ ಹಾಗೂ ಕಾರ್ಯವನ್ನು ಗುರುತಿಸಿ ಎಮ್ಮೆಮ್ಮಾಡು ಗ್ರಾಮದ ಕಾಳೇರ ಮತ್ತು ನೇರೂಟ್‍ಕಾರಂಡ ಕುಟುಂಬಸ್ಥರು ರಜಾಕ್ ಅವರ ಮನೆಯಲ್ಲಿ ಸಂಘಟನೆಯ ಸಂಸ್ಥಾಪಕರಾದ ಕಾಳೇರ ಆಲಿ, ನೆರೂಟ್‍ಕಾರಂಡ ರಜಾಕ್, ಕುಂಜಿಲ ಅಶ್ರಫ್ ಹಾಗು ಎಮ್ಮೆಮ್ಮಾಡು ಗ್ರಾಮದ ಅಪ್ಪಿ, ಶಬೀರ್, ಷರೀಫ್ ಅವರನ್ನು ಸನ್ಮಾನಿಸಿ, ಗೌರವಿಸಿದರು. ಕೊಡವ ಜಮ್ಮಾ ಮುಸ್ಲಿಂ ಸ್ಪೋಟ್ರ್ಸ್ ಮತ್ತು ಕಲ್ಚುರಲ್ ಸಂಸ್ಥಾಪಕ ಕುವಲೇರ ಅನಿಶ್ ಮಾತನಾಡಿ, ಈಗಾಗಲೇ ಆರಂಭವಾಗಿರುವ ಈ ಸಂಘಟನೆಯು ಮುಂದಿನ ತಲ ತಲಾಂತರದವರೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಮುಂಬರುವ ದಿನಗಳಲ್ಲಿ ನಮ್ಮ ಎಲ್ಲಾ ಕಾರ್ಯಕ್ರಮಗಳು ಮತ್ತಷ್ಟು ಯಶಸ್ವಿಯಾಗುವಂತೆ ಸದಾ ಏಕತೆಯೊಂದಿಗೆ ಮುಂದಕ್ಕೆ ಸಾಗುವುದಾಗಿ ಮತ್ತು ಈ ಸನ್ಮಾನ ಕಾರ್ಯಕ್ರಮ ನೆರವೇರಿಸಿದ ಎರಡೂ ಕುಟುಂಬಸ್ಥರಿಗೆ ಕೊಡವ ಜಮ್ಮಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚುರಲ್ ಕಮಿಟಿ ವತಿಯಿಂದ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಲತೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.