ನಾಪೋಕ್ಲು ಡಿ.25 NEWS DESK : ಹಲವು ವರ್ಷಗಳಿಂದ ಡಾಂಬರೀಕರಣ ಕಾಣದೆ ದುಸ್ಥಿತಿಯಲ್ಲಿದ್ದ ಕೊಕೇರಿ – ಕೊಳಕೇರಿ ಸಂಪರ್ಕ ರಸ್ತೆಯ ಕಾಮಗಾರಿ ಆರಂಭಗೊಂಡಿದೆ. ಚಾಲನೆ ದೊರೆತಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ಬಿಡುಗಡೆಯಾದ ರೂ.50 ಲಕ್ಷ ಕಾಮಗಾರಿಗೆ ಶಾಸಕರು ಭೂಮಿ ನೆರವೇರಿಸಿದ್ದರು. ಆದರೆ ಕಾಮಗಾರಿ ಪ್ರಾರಂಭಗೊಳ್ಳದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿಪಡಿಸಿದ ಹಿನ್ನೆಲೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡ ಎ.ಕೆ.ಹ್ಯಾರಿಸ್, ಗ್ರಾ.ಪಂ ಸದಸ್ಯ ಕೆ.ವೈ.ಅಶ್ರಫ್, ಇಬ್ರಾಹಿಂ ಹಳೇ ತಾಲ್ಲೂಕು, ಗ್ರಾಮಸ್ತರಾದ ಮೊಯ್ದಿ, ಮೈಮೂದ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.