ಮಡಿಕೇರಿ ಡಿ.27 NEWS DESK : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ಜಾತ್ರೋತ್ಸವದ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. ಮುಂಜಾನೆಯಿಂದಲೇ ಕವಾಟ ಪೂಜೆ, ತೈಲಾಭ್ಯಂಜನ, ಪಂಚಾಮೃತ ಅಭಿಷೇಕ, ಮಧ್ಯಾಹ್ನ ಧ್ವಜಸ್ತಂಭ ಪೂಜೆ, ಮಹಾಪೂಜೆ ಹಾಗೂ ತೀರ್ಥಪ್ರಸಾದ ವಿತರಣೆ ಜರುಗಿತು. ನಂತರ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಸಂಜೆ ನಂದಿಪಾರೆ ಕಾವೇರಿಯಲ್ಲಿ ದೇವರ ಜಳಕ ನಡೆಯಿತು. ಸಂಜೆ 6 ಗಂಟೆಗೆ ದೇವಾಲಯದ ಹೊರಾಂಗಣದಲ್ಲಿ ದೇವರ ನೃತ್ಯಬಲಿ, ನಡೆಭಂಡಾರ, 7.30 ಗಂಟೆಗೆ ಧ್ವಜಾವರೋಹಣ, ರಾತ್ರಿ 8.30 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 9 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಡಿ.28 ರಂದು ಬೆಳಿಗ್ಗೆ 10.30 ಗಂಟೆಗೆ ನವಕ ಕಲಶ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಮಧ್ಯಾಹ್ನ 12.15 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಮಂತ್ರಾಕ್ಷತೆ, 1 ಗಂಟೆಗೆ ಅನ್ನಸಂರ್ಪಣೆ ನೆರವೇರಲಿದೆ ದೇವಾಲಯ ಸಮಿತಿಯ ಅಧ್ಯಕ್ಷ ಶಶಿ ಜನಾರ್ಧನ ಮಾಹಿತಿ ನೀಡಿದ್ದಾರೆ.