ಮಡಿಕೇರಿ NEWS DESK ಡಿ.27 : ಮಹತ್ವಾಕಾಂಕ್ಷೆಯ ಮೈಸೂರು-ಕುಶಾಲನಗರ ಹೆದ್ದಾರಿ ಯೋಜನೆಯ ಸಾಕಾರಕ್ಕಾಗಿ ಕಾಮಗಾರಿ ನಡೆಯುವ ಪ್ರದೇಶದ ಮರಗಳನ್ನು ತೆರವುಗೊಳಿಸಲು ತಕ್ಷಣ ಅನುಮತಿ ನೀಡಬೇಕೆಂದು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಅರಣ್ಯ ಸಚಿವ ಈಶ್ವರ್ ಖ0ಡ್ರೆ ಅವರ ಬಳಿ ಮನವಿ ಮಾಡಿದ್ದಾರೆ.
ಮರಗಳನ್ನು ತೆರವುಗೊಳಿಸುವುದರಿಂದ ಕಾಮಗಾರಿ ವೇಗವನ್ನು ಪಡೆದುಕೊಳ್ಳುತ್ತದೆ. ಯೋಜನೆ ಪೂರ್ಣಗೊಂಡರೆ ಸಂಪರ್ಕ ವ್ಯವಸ್ಥೆ ಸುಧಾರಿಸುತ್ತದೆ, ಪ್ರಯಾಣದ ಸಮಯ ಕಡಿಮೆಯಾಗುತ್ತದೆ. ಮೈಸೂರು ಮತ್ತು ಕೊಡಗು ಪ್ರದೇಶಗಳಲ್ಲಿ ಆರ್ಥಿಕ ಅವಕಾಶಗಳನ್ನು ಹೆಚ್ಚಿಸುತ್ತದೆ. ಉತ್ತಮ ಸಂಪರ್ಕ ಮತ್ತು ಸಮೃದ್ಧ ಕರ್ನಾಟಕಕ್ಕಾಗಿ ಹೆದ್ದಾರಿ ಯೋಜನೆ ಶೀಘ್ರ ಅನುಷ್ಠಾನಗೊಳ್ಳುವ ಅಗತ್ಯವಿದೆ ಎಂದು ಯದುವೀರ್ ಒಡೆಯರ್ ವಿವರಿಸಿದ್ದಾರೆ.