ಭಾಗಮಂಡಲ ಡಿ.27 NEWS DESK : ಚೇರಂಗಾಲ ಗ್ರಾಮದ ಶ್ರೀ ಈಶ್ವರ ಭಗವತಿ ದೇವಾಲಯದ ವಾರ್ಷಿಕ ಪೂಜೆಯು ಶ್ರದ್ಧಾಭಕ್ತಿಯಿಂದ ಜರುಗಿತು. ಮುಂಜಾನೆಯಿಂದಲೇ ದೇವರಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು. ನಂತರ ವಿಶೇಷ ಮಹಾಪೂಜೆ ನೆರವೇರಿತು. ಪೂಜಾ ಕಾರ್ಯವು ರವಿ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಬಳಿಕ ತಕ್ಕರಾದ ಶಿರಕಜೆ ಸುಂದರ ಅವರ ನೇತೃತ್ವದಲ್ಲಿ ಗ್ರಾಮಸ್ಥರಿಂದ ಕೋಲಾಟ ನಡೆಯಿತು. ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರಿಂದ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ದೇವಾಲಯದ ಅಧ್ಯಕ್ಷರು ಹೊಸೂರು ಸತೀಶ್ ಕುಮಾರ್, ಕಾರ್ಯದರ್ಶಿ ಮತ್ತಾರಿ ರಾಜ, ಗ್ರಾ.ಪಂ ಸದಸ್ಯ ಶಿರಕಜೆ ನಾಗೇಶ್, ಸಂಘದ ಸದಸ್ಯರಾದ ಶಿರಕಜೆ ಟಿ.ಭವನ್ ಕುಮಾರ್, ಕುಂಬನ ರವಿಂದ್ರ, ಮೂಲೆಮಜಲು ಸುದಿ, ಪರಿವಾರ ಸಂತೋಷ್, ಶಿರಕಜೆ ತನುರಾಜ್, ಶಿರಕಜೆ ಪವನ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.