ಸಿದ್ದಾಪುರ ಡಿ.28 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗೆ ಉಚಿತವಾಗಿ ವೀಲ್ ಚೇರ್, ವಾಟರ್ ಬೆಡ್ ಹಾಗೂ ವಾತ್ಸಲ್ಯ ಕಿಟ್’ ಗಳನ್ನು ಚೆನ್ನಂಗಿ ಕಾರ್ಯಕ್ಷೇತ್ರದಲ್ಲಿ ವಿತರಣೆ ಮಾಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ರಾಕೇಶ್ ಮಾತನಾಡಿ, ಗ್ರಾಮದ ಕಮಲಮ್ಮ ಎಂಬುವವರು ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್ ಚೇರ್ ಉಚಿತವಾಗಿ ನೀಡಲಾಗಿದೆ ಹಾಗೂ ವಾತ್ಸಲ್ಯ ಕಿಟ್ ನ್ನು ಸದಸ್ಯರಾದ ರಾಜು, ವಾಟರ್ ಬೆಡ್ ನ್ನು ಗಣಪತಿ ಅವರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು. ಒಕ್ಕೂಟದ ಅಧ್ಯಕ್ಷ ಜೈಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ನಿಕಟಪೂರ್ವ ವ್ಯಕ್ತಿ ಹಾಗೂ ಚನ್ನಂಗಿ ಕಾರ್ಯಕ್ಷೇತ್ರದ ಮಾಜಿ ಸೇವಾ ಪ್ರತಿನಿಧಿ ಯತೀಶ್ ಹಾಜರಿದ್ದರು.