12 ರಾಶಿಗಳ ರಾಶಿಗಳ 2025 ರ ವರ್ಷ ಭವಿಷ್ಯ (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429)
ಮೇಷ ರಾಶಿ :: ಈ ರಾಶಿಯವರಿಗೆ ಮಿಶ್ರಫಲ ಕೊಡಲಿದೆ. ಉದ್ಯೋಗದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ, ಶನಿ ಪ್ರಭಾವ ಇರಲಿದೆ. ಸಾಡೆಸಾತ್ ಶನಿ ಆರಂಭವಾಗುವುದು, ಗುರು ಬಲವು ಮೇ ತಿಂಗಳವರೆಗೆ ಇರುವುದರಿಂದ ಯಾವುದೇ ಕೆಲಸ ಕಾರ್ಯಗಳನ್ನು ಮತ್ತು ಹಣಕಾಸಿನ ವ್ಯವಹಾರವನ್ನು ಮಾಡುವುದಾದರೆ ಮೇ ತಿಂಗಳ ಒಳಗೆ ಮಾಡಿಕೊಳ್ಳಬೇಕು. ಅನಾರೋಗ್ಯ, ಕೌಟುಂಬಿಕ ಕಲಹ ಆಗಲಿದೆ. :: ಪರಿಹಾರ :: ಶಿವ ದೇವರ ಆರಾಧನೆಯನ್ನು ಮಾಡಿ. ಶುಭ ಸಂಖ್ಯೆ :; 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ
ವೃಷಭ ರಾಶಿ :: ಈ ರಾಶಿಯವರಿಗೆ ಈ ವರ್ಷ ಉತ್ತಮ ಯೋಗವಿದ್ದು, ಅವಿವಾಹಿತರಿಗೆ ವಿವಾಹ ಯೋಗ, ಮನೆ ಕಟ್ಟುವವರಿಗೆ ಮನೆ ಸಂಪೂರ್ಣವಾಗಿ ಕಟ್ಟುವ ಯೋಗ, ಹಣ ಯೋಗ, 11ನೇ ಸ್ಥಾನದಲ್ಲಿ ಶನಿ ಇರುವುದರಿಂದ ಸ್ಥಾನಮಾನ ಪ್ರಾಪ್ತಿ, ಸನ್ಮಾನ, ಶತ್ರುನಾಶ, ಕೋರ್ಟು ಕಚೇರಿ ಕೆಲಸದಲ್ಲಿ ಜಯ, ಸ್ಥಿರಾಸ್ತಿ ಖರೀದಿ, ಉದ್ಯೋಗ ಪ್ರಾಪ್ತಿ, ಆರೋಗ್ಯ ಸುಧಾರಣೆ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ಮಿಥುನ ರಾಶಿ :: ಈ ರಾಶಿಯವರಿಗೆ ಈ ವರ್ಷ ಮಿಶ್ರಫಲ, ವರ್ಷಾರಂಭದಲ್ಲಿ ಅನಾವಶ್ಯಕ ತಿರುಗಾಟ, ಹಣ ವ್ಯಯ, ಅನಾರೋಗ್ಯ, ಬಂಧು ಕಲಹ, ಮೇ ತಿಂಗಳ ನಂತರ ಸ್ವಲ್ಪಮಟ್ಟಿಗಿನ ಪರಿಸ್ಥಿತಿ ಸುಧಾರಣೆ, ಆರೋಗ್ಯ ಸುಧಾರಣೆ, ಹಣದ ಒಳ ಹರಿವು ಹೆಚ್ಚಾಗಲಿದ್ದು, ಸ್ನೇಹಿತರಿಂದ ಸಹಾಯ, ಮಕ್ಕಳಿಂದ ಶುಭ ಸುದ್ದಿ, ಉದ್ಯೋಗದಲ್ಲಿ ಯಶಸ್ಸು. :: ಪರಿಹಾರ :: ಆಂಜನೇಯನ ಆರಾಧನೆ ಮಾಡಿ :: ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು
ಕರ್ಕಾಟಕ ರಾಶಿ :: ಈ ರಾಶಿಯವರಿಗೆ ಈ ವರ್ಷ ನವಮದಲ್ಲಿ (9) ಶನಿಯಿರುವುದರಿಂದ ಶೇ.75ರಷ್ಟು ಉತ್ತಮ ಫಲ, ಕಾಲು ಭಾಗದಷ್ಟು ಕೆಟ್ಟ ಫಲ, ವರ್ಷಾರಂಭದಲ್ಲಿ ಸಾಲ ಸೌಲಭ್ಯ ದೊರಕಲಿದ್ದು, ಕೆಲಸದ ಸ್ಥಳದಲ್ಲಿ ಉತ್ತಮ ಗೌರವ, ಬಂಧು-ಬಾಂಧವರ ಪ್ರೀತಿ, ವಿಶ್ವಾಸ, ಮಕ್ಕಳಿಂದ ಶುಭವಾರ್ತೆ, ಹೊಸ ವಸ್ತು ಖರೀದಿ. ಒಟ್ಟಾರೆ ಸಂತೋಷಕರ ವಾತಾವರಣ. ಮೇ ತಿಂಗಳ ನಂತರ ಕೆಲವು ಸಮಸ್ಯೆಗಳು ಉದ್ಯೋಗ ಸ್ಥಾನದಲ್ಲಿ ಕೌಟುಂಬಿಕ ಸ್ಥಾನದಲ್ಲಿ ಕಂಡುಬರಲಿದೆ ಜಾಗರುಕರಾಗಿರಿ. :: ಪರಿಹಾರ :: ಮಹಾಗಣಪತಿಯ ಆರಾಧನೆ ಮಾಡಿ :: ಶುಭ ಸಂಖ್ಯೆ :: 2, 3, 9 :: ಶುಭಬಣ್ಣ :: ಬಿಳಿ, ಕೆಂಪು, ಹಳದಿ
ಸಿಂಹ ರಾಶಿ :: ಈ ರಾಶಿಯವರಿಗೆ ವರ್ಷಾರಂಭದಲ್ಲಿ ಶುಭಫಲವಿದ್ದು, ಧನಾಗಮನ, ಕೆಲಸ ಕಾರ್ಯಗಳಲ್ಲಿ ಜಯ, ತೀರ್ಥ ಕ್ಷೇತ್ರ ದರ್ಶನವಾಗಲಿದೆ. ಆರೋಗ್ಯದಲ್ಲಿ ಏರು-ಪೇರು, ಕೌಟುಂಬಿಕ ದಾಂಪತ್ಯ ಜೀವನದಲ್ಲಿ ಕಲಹ, ಮಕ್ಕಳ ವಿಷಯದಲ್ಲಿ ಚಿಂತೆ, ಮೇ ತಿಂಗಳ ನಂತರ ಧನಾಗಮನ, ಅವಿವಾಹಿತರಿಗೆ ವಿವಾಹ ಯೋಗ, ಗೃಹ ಯೋಗ, ಭೂಮಿ ಯೋಗ, ಕೋರ್ಟು ಕಚೇರಿ ಕೆಲಸದಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ, ಬಂಧು-ಬಾಂಧವರ ಪ್ರೀತಿ, ವಿಶ್ವಾಸಗಳಿಸಿದರು ಬಂಧು ಕಲಹ, ದಾಯಾದಿ ಕಲಹ ನಡೆಯಲಿದೆ. :: ಶುಭ ಸಂಖ್ಯೆ :: 1, 3, 5, :: ಶುಭ ಬಣ್ಣ :: ಕೆಂಪು, ಹಳದಿ, ಬಿಳಿ
ಕನ್ಯಾ ರಾಶಿ :: ಈ ರಾಶಿಯವರಿಗೆ ಈ ವರ್ಷದಲ್ಲಿ ಆದಾಯಕ್ಕಿಂತ ಖರ್ಚು. ಕೌಟುಂಬಿಕ ಚಿಂತೆ, ಕಚೇರಿ ಕೆಲಸದಲ್ಲಿ ಅಪಜಯ, ಪಿತೃವಿಯೋಗ ಆಗುವ ಸಾಧ್ಯತೆ. ತಾಯಿಯ ಅನಾರೋಗ್ಯ, ಮನೆಕೆಲಸದಲ್ಲಿ ಖರ್ಚು, ಮಂಗಳ ಕಾರ್ಯ ನೆರವೇರಲಿದೆ. ಸಂತಾನ ಭಾಗ್ಯ ದೊರಕಲಿದ್ದು, ಟೀಕೆ-ಟಿಪ್ಪಣಿಗೆ ಒಳಗಾಗುವಿರಿ. ದೂರ ಪ್ರಯಾಣ ಮಾಡಲಿದ್ದೀರಿ. ಉದ್ಯೋಗದಲ್ಲಿ ಹಿಂಬಡ್ತಿ, ಮಕ್ಕಳಿಂದ ಖರ್ಚು :: ಪರಿಹಾರ :: ಮಹಾಗಣಪತಿಯ ಆರಾಧನೆ ಮಾಡಿ :: ಶುಭ ಸಂಖ್ಯೆ :: 3, 5, 6, :: ಶುಭ ಬಣ್ಣ :: ಹಸಿರು, ಕೆಂಪು.
ತುಲಾರಾಶಿ :: ಈ ರಾಶಿಯವರಿಗೆ ಈ ವರ್ಷ ಒಂಭತ್ತನೇಯ ಸ್ಥಾನದಲ್ಲಿ ಗುರುಯಿರುವುದರಿಂದ 6ನೇ ಮನೆಯಲ್ಲಿ ಶನಿಯಿರುವುದರಿಂದ ಉತ್ತಮ ಫಲ ದೊರಕುವುದರಲ್ಲಿ ನಿಸ್ಸಂಶಯ. ಉತ್ತಮ ಕಾರ್ಯಸಾಧನೆ ನಡೆಯಲಿದ್ದು, ಕೌಟುಂಬಿಕ ಸಮಸ್ಯೆ ಪರಿಹಾರವಾಗಲಿದೆ. ಕೋರ್ಟು ಕಚೇರಿ ಕೆಲಸದಲ್ಲಿ ಜಯ, ಅವಿವಾಹಿತರಿಗೆ ವಿವಾಹ ಯೋಗ, ಸಂತಾನ ಭಾಗ್ಯ ಬಯಸುವವರಿಗೆ ಸಂತಾನ ಭಾಗ್ಯ, ಗೃಹ ಯೋಗ ಕೂಡಿಬರಲಿದೆ. ಆದರೂ ಬೆನ್ನಿನ ಭಾಗದ ನೋವಿನಿಂದ ಅನಾರೋಗ್ಯ ಕಾಡಲಿದೆ. :: ಪರಿಹಾರ :: ಶಿವರಾಧನೆ ಮಾಡಿ :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಹಸಿರು, ಬಿಳಿ, ಕಪ್ಪು
ವೃಶ್ಚಿಕ ರಾಶಿ :: ಈ ರಾಶಿಯವರಿಗೆ ಪಂಚಮ ಶನಿ ಕಾಡಲಿದ್ದು, ಅಷ್ಟಮ ಗುರು ನಡೆಯಲಿದೆ. ಮುಟ್ಟಿದ್ದೆಲ್ಲ ಮಣ್ಣಾಗಲಿದೆ. ಸಾಲಬಾದೆ ಹೆಚ್ಚಾಗಲಿದೆ. ಅವಮಾನ, ಮಾನಸಿಕ ಚಿಂತೆ, ಅಪವಾದ, ಬಂಧು-ಬಾಂಧವರಿಂದ ಕಲಹ, ವಿದ್ಯಾರ್ಥಿಗಳಿಗೆ ಹಿನ್ನೆಡೆ, ಮಕ್ಕಳಿಂದ ಚಿಂತೆ, ಬೆಳೆನಾಶ, ಅನಾರೋಗ್ಯ, ಸ್ಥಾನ ಪಲ್ಲಟ, ಈ ವರ್ಷ ಅತ್ಯಂತ ಕಷ್ಟ ಕಾಲದ ಸಮಯವನ್ನು ಎದುರಿಸಲಿದ್ದೀರಿ. ಆದರೂ ಬಹುತೇಕ ಮಿತ್ರರಿಂದ ಸಹಾಯವನ್ನು ಪಡೆಯಬೇಕಾದಿತು ಪ್ರತಿಯೊಂದು ಹೆಜ್ಜೆಯು ಎಚ್ಚರಿಕೆಯಿಂದ ನಡೆಯಿರಿ, ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ :: ಪರಿಹಾರ :: ಶಿವಾರಾಧನೆ, ಆಂಜನೇಯನ ಆರಾಧನೆ ಮಾಡಿ :: ಶುಭ ಸಂಖ್ಯೆ :: 1, 2, 3 :: ಶುಭ ಬಣ್ಣ :: ಕೆಂಪು, ಹಳದಿ, ಬಿಳಿ ::
ಧನು ರಾಶಿ :: ಈ ರಾಶಿಯವರಿಗೆ ಉತ್ತಮ ಯೋಗ, ಅಪೂರ್ಣ ಕೆಲಸ ಕಾರ್ಯ ಯಶಸ್ವಿಯಾಗಿ ಕೈಗೂಡಲಿದೆ. ಬಂಧುಗಳ ಸಹಾಯ, ಉದ್ಯೋಗದಲ್ಲಿ ಪ್ರಗತಿ, ಅವಿವಾಹಿತರಿಗೆ ವಿವಾಹ ಯೋಗ, ಕೋರ್ಟು ಕಚೇರಿ ಕೆಲಸದಲ್ಲಿ ಜಯ, ಮಿತ್ರರಿಗೆ ಸಹಾಯವನ್ನು ಮಾಡಲಿದ್ದೀರಿ. ಆದರೂ ಮಕ್ಕಳ ವಿಚಾರದಲ್ಲಿ ಚಿಂತೆ, ಮಕ್ಕಳ ಅನಾರೋಗ್ಯಕ್ಕೆ ಖರ್ಚು, ಮಾನಸಿಕ ಒತ್ತಡ, ಹಣ ಬಂದಷ್ಟೆ ನೀರಿನಂತೆ ಖರ್ಚಾಗಲಿದೆ. :: ಪರಿಹಾರ ಶಿವಾರಾಧನೆ ಮಾಡಿ :: ಶುಭಸಂಖ್ಯೆ :: 1, 3, 8, :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ
ಮಕರ ರಾಶಿ :: ಈ ರಾಶಿಯವರಿಗೆ ಮಿಶ್ರ ಫಲ ಹೊಂದಲಿದ್ದೀರಿ, ಸಾಡೇಸಾತಿ ಶನಿ ಬಿಡುಗಡೆಯಾದರೂ ಗುರುಬಲ ಅಷ್ಟೇನು ಪ್ರಭಾವವಾಗಿ ಇಲ್ಲದೆಯಿರುವುದರಿಂದ ಅನಾರೋಗ್ಯ ಮುಂದುವರೆಯಲಿದೆ. ಮಾನಸಿಕ ಚಿಂತೆ, ಅನಾವಶ್ಯಕ ಹಣ ಖರ್ಚು, ಬಿಡುವಿಲ್ಲದ ಕೆಲಸ, ಉದ್ಯೋಗದಲ್ಲಿ ಜಯ, ಬಂಧು-ಬಾಂಧವರ ವಿಶ್ವಾಸ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ :: ಪರಿಹಾರ :: ಮಹಾಗಣಪತಿ ಆರಾಧನೆ ಮಾಡಿ :: ಶುಭ ಸಂಖ್ಯೆ :: 5, 6, 8, :: ಶುಭ ಬಣ್ಣ :: ನೀಲಿ, ಹಸಿರು, ಹಳದಿ
ಕುಂಭ ರಾಶಿ :: ಈ ರಾಶಿಯವರಿಗೆ ಮಿಶ್ರಫಲವನ್ನು ಹೊಂದುವಿರಿ. 2024ಗಿಂತ 2025 ಸ್ಪಲ್ಪ ಮಟ್ಟಿಗೆ ಚೇತರಿಸಿಕೊಳ್ಳುವರು. ಅನಾರೋಗ್ಯ ಮುಂದುವರೆಯಲಿದೆ ಹಾಗೂ ಮಾನಸಿಕ ಚಿಂತೆಯು ಮುಂದುವರೆಯಲಿದೆ. ಹಣಕಾಸು ಚೇತರಿಕೆಯಾಗಲಿದ್ದು, ಮಕ್ಕಳಿಂದ ಸಂತೋಷ, ಕೋರ್ಟು ಕಚೇರಿ ಕಾರ್ಯದಲ್ಲಿ ಯಶಸ್ವಿ, ಹಿರಿಯರಿಂದ ಪ್ರಶಂಸೆ, ಉದ್ಯೋಗದಲ್ಲಿ ಬಡ್ತಿ. :: ಪರಿಹಾರ :: ಶಿವರಾಧನೆ ಮಾಡಿ :: ಶುಭ ಸಂಖ್ಯೆ :: 1 6, 9 :: ಶುಭ ಬಣ್ಣ :: ಕೇಸರಿ, ಕೆಂಪು
ಮೀನಾ ರಾಶಿ :: ಈ ರಾಶಿಯವರಿಗೆ ಈ ವರ್ಷ ಪ್ರಾರಂಭದಲ್ಲಿ ಉತ್ತಮ ಇದ್ದರೂ ಮುಕ್ಕಾಲು ಭಾಗ ಮಾನಸಿಕ ಒತ್ತಡ, ಕೌಟುಂಬಿಕ ಕಲಹ, ವೈವಾಹಿಕ ಜೀವನದಲ್ಲಿ ಏರು-ಪೇರು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೆಲಸ ಕಾರ್ಯದಲ್ಲಿ ಹಿನ್ನೆಡೆ, ಅನಾವಶ್ಯಕ ಹಣ ಖರ್ಚು, ಒಡ ಹುಟ್ಟಿದವರಿಂದ ಕಿರಿಕಿರಿ, ಆದರೂ ವರ್ಷಾರಂಭದಲ್ಲಿ ಎಲ್ಲವೂ ಸರಿಯಿದ್ದರು, ವರ್ಷದ ಕೊನೆಯಲ್ಲಿ ತುಂಬಾ ಚಿಂತೆಗೆ ಒಳಗಾಗುವಿರಿ. :: ಪರಿಹಾರ :: ಶಿವಾರಾಧನೆ ಹಾಗೂ ಆಂಜನೇಯನ ಆರಾಧನೆ ಮಾಡಿ :: ಶುಭಸಂಖ್ಯೆ :: 1, 3, 8 :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ.