ಮಡಿಕೇರಿ NEWS DESK ಡಿ.29 : ಲಾರಿಯೊಂದು ಅಗ್ನಿಗಾಹುತಿಯಾದ ಘಟನೆ ಮಡಿಕೇರಿ ಸಮೀಪ ಜೋಡುಪಾಲ ಹೆದ್ದಾರಿಯಲ್ಲಿ ನಡೆದಿದೆ. ಹೆಚ್ ಡಿ ಕೋಟೆಯಿಂದ ಉಡುಪಿಗೆ ಭತ್ತವನ್ನು ಕೊಂಡೊಯ್ಯುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಹಾಗೂ ಕ್ಲೀನರ್ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ.









