ಮಡಿಕೇರಿ NEWS DESK ಡಿ.29 : ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ನಡೆಯಿತು. ಬೈಠಕ್ ನಲ್ಲಿ ವೇಧಿಕೆಯ ನೂತನ ಜಿಲ್ಲಾ ಸಂಯೋಜಕರನ್ನಾಗಿ ಸೋಮವಾರಪೇಟೆ ತಾಲ್ಲೂಕಿನ ರಂಜನ್ ಗೌಡ(ಬೋಜೆ ಗೌಡ) ಅವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯ ಕೊಡಗು ಜಿಲ್ಲಾ ಸಂಯೋಜಕರಾಗಿದ್ದ ಕುಕ್ಕೇರ ಅಜಿತ್ ಅವರನ್ನು ಕರ್ನಾಟಕ ದಕ್ಷಿಣ ಪ್ರಾಂತ ಸಮಿತಿಯ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.









