ಮಡಿಕೇರಿ NEWS DESK ಡಿ.29 : ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಗ್ರಾಮೋತ್ಸವಮ್ ಥ್ರೋ ಬಾಲ್ ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಪಿಜಿ ಪುದುರ್ ತಂಡವನ್ನು ಮಣಿಸಿದ ಕೊಡಗಿನ ಮರಗೋಡು ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಚಾಂಪಿಯನ್ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ರೂ.5 ಲಕ್ಷ ನಗದು ಬಹುಮಾನ ನೀಡಲಾಯಿತು. ಈಶ ಫೌಂಡೇಶನ್ ನ ಆದಿಯೋಗಿ ಮೈದಾನದಲ್ಲಿ ರೋಚಕ ಫೈನಲ್ ಪಂದ್ಯಾವಳಿ ನಡೆಯಿತು. ವಿಜೇತರಿಗೆ ಸದ್ಗುರು ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ತಾರೆಯರಾದ ವೀರೇಂದ್ರ ಸೆಹ್ವಾಗ್, ವೆಂಕಟೇಶ್ ಪ್ರಸಾದ್ ಬಹುಮಾನ ವಿತರಿಸಿದರು. ಪಂದ್ಯಾವಳಿಯಲ್ಲಿ ದೇಶದ ವಿವಿಧ ತಂಡಗಳು ಭಾಗವಹಿಸಿದ್ದವು.









