ಮಡಿಕೇರಿ ಡಿ.31 NEWS DESK : ಸಿದ್ದಾಪುರದ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಜ.3 ರಿಂದ 6ರ ವರೆಗೆ ತಿರು ಮಹೋತ್ಸವ ನಡೆಯಲಿದೆ.
ಬ್ರಹ್ಮಶ್ರೀ ಈಡವಲತ್ ಪುಡಯೂರ್‍ಮನ ಕುಬೇರನ್ ನಂಬೂದಿರಿಪಾಡ್ ತಂತ್ರಿಗಳು ರಾಜರಾಜೇಶ್ವರ ದೇವಸ್ಥಾನದ ತಲೋರ ತಳಿಪರಂಬ್ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ. ಜ.3 ರಂದು ಸಂಜೆ 5.30 ಗಂಟೆಯಿಂದ ಪುಣ್ಯಾಹ ಪ್ರಾಸಶುದ್ಧಿ, ವಾಸ್ತುಬಲಿ, ದೀಪಾರಾಧನೆ, ತ್ರಿಕೊಡಿಯೆಟಂ, ಅತ್ತಾಯ ಪೂಜಾ, ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದೆ. ಜ.4 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾಪೂಜೆ, ಮಹಾಸುದರ್ಶನ ಹೋಮ, ಮಹಾಮೃತ್ಯುಂಜಯ ಹೋಮ, ನವಕಂ ಪಂಚಗವ್ಯಂ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ಭಗವತಿಸೇವೆ, ದೀಪಾರಾಧನೆ, ಸಹಸ್ರದೀಪಾ, ಮಹಾಪೂಜೆ, ಅನ್ನಸಂರ್ಪಣೆ ನಡೆಯಲಿದೆ. ಜ.5 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾಪೂಜೆ, ಗುಳಿಗ, ನಾಗದೇವರಿಗೆ ಪೂಜೆ, ನವಗಂ, ಪಂಚಗವ್ಯಂ, ಕಲಶಭಿಷೇಕ (ಬೆಳಿಗ್ಗೆ 9 ಗಂಟೆಗೆ ದೇವಿಗೆ ಪೊಂಗಾಲ) ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ದೀಪಾರಾಧನೆ, ತ್‍ಡಂಬ್‍ನೃತ್ಯ, ಅನ್ನದಾನ ನೆರವೇರಲಿದೆ. ಜ.6 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾಪೂಜೆ, ನವಗಂ, ಪಂಚಗವ್ಯಂ, ಕಲಶಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 5.30 ಗಂಟೆಗೆ ಬಲಿಬಿಂಬದ ಮೆರವಣಿಗೆ, ದೀಪಾರಾಧನೆ, ಅತ್ತಾಯಪೂಜಾ ತ್ರಿಕೊಡಿಎರಕಂ, ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಿದ್ದಾಪುರ ಶ್ರೀ ದುರ್ಗಾಭಗವತಿ ದೇವಾಲದಯ ಆಡಳಿತ ಮಂಡಳಿ ಕೋರಿದೆ.
ದೇವಾಲಯದ ಐತಿಹ್ಯ :: 2018ರ ಆಗಸ್ಟ್ 23ರಂದು ಸಣ್ಣಗುಡಿಯಲ್ಲಿ ಸಿದ್ದರಪುರವಾದ ಸಿದ್ದಾಪುರದಲ್ಲಿ ಆರಂಭಗೊಂಡು 2019 ಅಕ್ಟೋಬರ್ 30ರ ದೀಪಾವಳಿ ಹಬ್ಬದಂದು ಭವ್ಯವಾದ ದೇವಾಲಯಕ್ಕೆ ಬ್ರಹ್ಮಶ್ರೀ ಈಡವಲತ್ ಪುಡಯೂರ್‍ಮನ ಕುಬೇರನ್ ನಂಬೂದಿರಿಪಾಡ್ ತಂತ್ರಿಗಳು ಶ್ರೀ ರಾಜರಾಜೇಶ್ವರ ದೇವಸ್ಥಾನ ತಲೋರ ತಳಿಪರಂಬ್ ಇವರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡಿತು. 5 ವರ್ಷಗಳಿಂದ ನಿರಂತರವಾಗಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ವರ್ಷಂಪ್ರತಿ ಪ್ರತಿಷ್ಠಾಪನ ಪೂಜೆ, ನವರಾತ್ರಿ ಪೂಜೆ, ಗಣೇಶ ಚತುರ್ಥಿ, ಓಣಂ, ವಿಶು ಹಾಗೂ ಮಲೆಯಾಳಂ ತಿಂಗಳ ಮೊದಲ ದಿನ ಗಣಪತಿ ಹೋಮ, ಗುಳಿಗ ದೇವರಿಗೆ ತಿಂಗಳ ವಿಶೇಷ ಪೂಜೆ, ನಾಗ ದೇವರಿಗೆ ಆಶ್ಲೇಷ ನಕ್ಷತ್ರದ ದಿನ ವಿಶೇಷ ಪೂಜೆ, ದೇವಿಗೆ ಭಗವತಿ ಸೇವೆ, ಕೃಷ್ಣಾ ಜನ್ಮಾಷ್ಠಮಿಗೆ ವಿಶೇಷ ಪೂಜೆ ಹಾಗೂ 4 ದಿನಗಳ ವಾರ್ಷಿಕ ತಿರು ಮಹೋತ್ಸವವನ್ನು ಮೃತ್ಯುಂಜಯ ಹೋಮ, ಮಹಾಸುದರ್ಶನ ಹೋಮ ನಡೆಸಿಕೊಂಡು ಬರಲಾಗುತ್ತಿದೆ. ಈ ದೇವಾಲಯದಲ್ಲಿ 26 ವಿವಾಹಗಳು ನಡೆದು ಮಕ್ಕಳಿಗೆ ಅನ್ನ ಪ್ರಾಶನಃ ನೀಡುವುದರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. 5 ವರ್ಷಗಳಲ್ಲಿ ಯಾರಿಂದಲು ದೇಣಿಗೆಯನ್ನು ಪಡೆಯದೇ ಎಲ್ಲಾ ಪೂಜಾ ಕಾರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುವುದಕ್ಕೆ ಇಲ್ಲಿಯ ಶ್ರೀ ಕೃಷ್ಣ ಶ್ರೀ ದುರ್ಗ ಭಗವತಿ, ಗಣಪತಿ, ನಾಗದೇವರು, ಗುಳಿಗ ದೇವರ ಶಕ್ತಿಯು ಕಾರಣವಾಗಿದೆ. 5 ವರ್ಷಗಳಲ್ಲಿ ಅತ್ಯಂತ ಭವ್ಯವಾದ ಸುಂದರವಾದ ದೇವಾಲಯವಾಗಿ ಕೊಡಗಿನಲ್ಲಿ ಕಂಗೊಳಿಸುತ್ತಿದೆ. ಈ ದೇವಾಲಯದ ಪಕ್ಕದಲ್ಲೇ ಒಂದು ಸುಂದರವಾದ ಕೆರೆಯು ಜೀರ್ಣಾವಸ್ಥೆಯಿಂದ ಪುನರುದ್ಧಾನದ ಕಡೆಗೆ ಸಾಗುತ್ತಿದೆ. ದೇವಾಲಯದ ಬಾಗಿಲು ದಿನಂಪ್ರತಿ 6 ಗಂಟೆಯಿಂದ ಆರಂಭವಾಗಿ 10:30ರ ವರೆಗೆ ತೆರೆದಿರುತ್ತದೆ. ಸಂಜೆ 5:30ರಿಂದ 7:30ರ ವರೆಗೆ ತೆರೆದಿರುತ್ತದೆ.